Thursday, June 27, 2024

ಸತ್ಯ | ನ್ಯಾಯ |ಧರ್ಮ

‘ಟಿವಿ ವಿಕ್ರಮ’ ಮಾಧ್ಯಮಕ್ಕೆ ಸಂಬಂಧಿಸಿದವರ ಲಾಡ್ಜ್ ಮೇಲೆ ದಾಳಿ ; 9 ಮಂದಿಯ ಬಂಧನ

ಮಂಗಳೂರಿನ ಸುರತ್ಕಲ್ ನಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಗೆ ದಾಳಿ ಮಾಡಿ, 9 ಜನರನ್ನು ಪೊಲೀಸರು ಬಂಧಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುರತ್ಕಲ್ ನ ಪ್ಯಾಪಿಲೋನ್ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಲಾಡ್ಜಿಂಗ್ ಮೇಲೆ ಈ ದಾಳಿ ನಡೆದಿದ್ದು ಈ ಬಾರ್ ಅಂಡ್ ರೆಸ್ಟೋರೆಂಟ್ ‘ಟಿವಿ ವಿಕ್ರಮ’ ಮಾಧ್ಯಮದ ಮಾಲಿಕನ ಸಹೋದರನದು ಎಂಬುದು ತಿಳಿದು ಬಂದಿದೆ.

ಕಳೆದ ಭಾನುವಾರ ರಾತ್ರಿ ಸುರತ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಕಡೆಯಿಂದ ದಾಳಿ ನಡೆದಿದ್ದು, ಲಾಡ್ಜ್ ನ ಕೊಠಡಿಯೊಂದರಲ್ಲಿ ಅಂಧರ ಬಾಹರ್ ಕಾರ್ಡ್ ಹಾಗೂ ಜೂಜಾಟದಲ್ಲಿ ತೊಡಗಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಕಾರ್ಡ್ ಆಡುತ್ತಿದ್ದ ಏಳು ವ್ಯಕ್ತಿಗಳು ಮತ್ತು ಲಾಡ್ಜ್ ಮ್ಯಾನೇಜರ್ ಸೇರಿದಂತೆ ಇಬ್ಬರು ಲಾಡ್ಜಿಂಗ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಲಾಲ್ ಸಾಬ್ (31-ಮುಲ್ಕಿ); ಅಮೀರ್ ಗನಿಸಾಬ್ (31)ಮುಲ್ಕಿ; ದಸ್ತಗಿರಿ ಸಾಬ್ (32) ಮುಲ್ಕಿ; ಸಿದ್ದಣ್ಣ (47) ಮುಲ್ಕಿ; ಮೊಹಮ್ಮದ್ ರಫೀಕ್ (34) ; ಪರಶುರಾಮ (29) ಜಿತೇಂದ್ರ ಹಿರಾಸಿಂಗ್ (34) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಲಾಡ್ಜ್ ಮ್ಯಾನೇಜರ್ ಬಾಬು ಚಂದ್ರಶೇಖರ್ (62) ಉಡುಪಿ, ಮತ್ತು ರಕ್ಷಿತ್ (23) ಎಂಬುವವರಿದ್ದಾರೆ. ದಾಳಿಯಲ್ಲಿ 26,020 ರೂ ನಗದು, ಒಂಬತ್ತು ಮೊಬೈಲ್ ಫೋನ್‌ಗಳು, ಎರ್ಟಿಗಾ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ 47/2023 ಕಲಂ 79, 80 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಲಾಡ್ಜ್ ಮಾಲೀಕ ‘ಟಿವಿ ವಿಕ್ರಮ’ ಮಾಧ್ಯಮದ ಮಾಲಿಕನ ಸಹೋದರನದು ಎಂಬುದು ತಿಳಿದು ಬಂದಿದೆ.

ಒಳಗಡೆ ಟಿವಿ ವಿಕ್ರಮ ಮಾಧ್ಯಮದ ಮಹೇಶ್ ವಿಕ್ರಂ ಹೆಗಡೆಗೆ ಸೇರಿದ ಹೊಟೆಲ್ ಇದೆಂಬ ಮಾತು ಕೇಳಿಬರುತ್ತಿದೆ. ಒಂದು ಕಡೆ ವಿಕ್ರಮ ಟಿವಿಯಲ್ಲಿ ದಿನನಿತ್ಯ ಮುಸ್ಲಿಂ ವಿರೋದಿ ದ್ವೇಷ ಬೆಳೆಸುತ್ತಿದ್ದರೆ ಈ ರೆಸ್ಟೊರೆಂಟ್ ನಲ್ಲಿ ಮುಸ್ಲಿಂ ಪುಡಾರಿಗಳಿಗೆ ಅಂದರ್ ಬಾಹರ್ ಇಸ್ಪೀಟು ದಂದೆ ನಡೆಸಲು ಅವಕಾಶ ಕೊಟ್ಟಿರುವುದು ಕಾಣಿತ್ತಿದೆ. ಆದರೆ ಈ ಕುರಿತು FIR ಯಾಕೆ ದಾಕಲಾಗಿಲ್ಲ ಎಂಬ ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕು

Related Articles

ಇತ್ತೀಚಿನ ಸುದ್ದಿಗಳು