Saturday, August 23, 2025

ಸತ್ಯ | ನ್ಯಾಯ |ಧರ್ಮ

ವಾಲ್ಮೀಕಿ ನಿಗಮ ಹಗರಣ: ಇಡಿ ವಶದಲ್ಲಿ ಇಬ್ಬರು ಶಾಸಕ ನಾಗೇಂದ್ರ ಆಪ್ತ ಸಹಾಯಕರು

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಬಳ್ಳಾರಿ ಮನೆಯ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ದಾಳಿ ಮಾಡಿದ್ದು, ಅವರ ಇಬ್ಬರು ಆಪ್ತ ಸಹಾಯಕರನ್ನು ವಶಕ್ಕೆ ಪಡೆದಿದೆ.

ವಿಜಯಕುಮಾರ್ ಮತ್ತು ಚೇತನ್ ಎನ್ನುವ ವ್ಯಕ್ತಿಗಳನ್ನು ಇಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದು, ಈ ಇಬ್ಬರು ಶಾಸಕ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಇಂದು (ಬುಧವಾರ) ಬೆಳಗಿನ ಜಾವ ಮೂರು ತಂಡಗಳಾಗಿ, ಸಿಆರ್‌ಪಿಎಫ್‌ ಭದ್ರತೆಯೊಂದಿಗೆ ಇಡಿ ನಾಗೇಂದ್ರ ಅವರ ಮನೆಗೆ ದಾಳಿ ನಡೆಸಿತು. ಜೊತೆಗೆ ಅವರ ಬೆಂಗಳೂರಿನ ಮನೆಯ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ಕುರಿತು ಸ್ಥಳೀಯ ಪೊಲೀಸರಿಗೆ ಯಾವುದೇ ಇದ್ದಿರಲಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಶಾಸಕರ ಮನೆಯ ಸುತ್ತ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ವಾಲ್ಮೀಕಿ ನಿಗಮದ ಹಗರಣದ ವಿಷಯದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಗೆ ಮಣಿದು ನಾಗೇಂದ್ರ ಅವರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ಪಡೆದಿದ್ದರೆ. ಈ ಕುರಿತು ತನಿಖೆಯನ್ನೂ ಆರಂಭಿಸಲಾಗಿತ್ತು. ಈ ನಡುವೆ ಯುನಿಯನ್ ಬ್ಯಾಂಕ್ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page