Saturday, August 9, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಫೈಲ್ಸ್: ದೂರುದಾರ ಶವ ಹೂತಿದ್ದು ನೋಡಿರುವುದಾಗಿ ಮತ್ತೆ ಇಬ್ಬರಿಂದ SIT ಗೆ ದೂರು

ಬೆಳ್ತಂಗಡಿ ತಾಲ್ಲೂಕು ಕೇಂದ್ರದಲ್ಲಿ ಎಸ್ಐಟಿ ಕಛೇರಿ ಪ್ರಾರಂಭವಾಗುತ್ತಿದ್ದಂತೆಯೇ ದೂರುದಾರ ಶವ ಹೂತಿದ್ದನ್ನು ನೋಡಿರುವುದಾಗಿ ಮತ್ತೆ ಇಬ್ಬರು ಎಸ್ಐಟಿ ಅಧಿಕಾರಿಗಳಿಗೆ ಸಾಕ್ಷ್ಯ ನುಡಿದಿದ್ದಾರೆ. ಅನಾಮಿಕ ವ್ಯಕ್ತಿ ಈ ಹಿಂದೆ ಶವ ಹೂತಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದಾಗಿ ಮತ್ತೆ ಇಬ್ಬರಿಂದ ಎಸ್‌ಐಟಿಗೆ ದೂರು ಸಲ್ಲಿಸಿದ್ದಾರೆ.

ಎಸ್ ಐ ಟಿ ಅಧಿಕಾರಿಗಳ ಸೂಚನೆಯ ಮೇರೆಗೆ ಧರ್ಮಸ್ಥಳ ಠಾಣೆಗೆ ದೂರು ಸಲ್ಲಿಸಲಾಗಿದೆ. ‘ಮಾಧ್ಯಮಗಳಲ್ಲಿ ತೋರಿಸುತ್ತಿರುವ ವ್ಯಕ್ತಿಯನ್ನು ನಾವು ಗುರುತಿಸಿರುತ್ತೇವೆ. ಧರ್ಮಸ್ಥಳದ ವಿವಿಧಡೆ ಅಪರಿಚಿತ ಶವವುದಿರುವುದನ್ನು ನೋಡಿರುತ್ತೇವೆ. ಸರ್ಕಾರ ಸ್ಥಾಪಿಸಿರುವ ಎಸ್‌ಐಟಿಗೆ ಸಹಕರಿಸಲು ನಾವು ನಿರ್ಧರಿಸಿದ್ದೇವೆ ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಸಾಕ್ಷಿದಾರರು ದೂರು ನೀಡಿದ್ದಾರೆ.

ದೂರುದಾರ ತೋರಿಸುತ್ತಿರುವ ಸ್ಥಳಗಳಲ್ಲಿ ಕಳೆಬರಹ ಹೊರ ತೆಗೆಯಲು ಶೋಧ ಕಾರ್ಯಾಚರಣೆಯಲ್ಲಿ ನಮ್ಮನ್ನು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ರಹಸ್ಯವಾಗಿ ಶವ ಹೂತಿದ್ದನ್ನು ಸ್ಥಳಗಳು ತೋರಿಸಲು ನಮಗೆ ಅವಕಾಶ ನೀಡಿ ವಿಶೇಷ ತಂಡಕ್ಕೆ ಮತ್ತಿಬ್ಬರು ಸಾಕ್ಷಿದಾರರು ದೂರು ನೀಡಿದ್ದಾರೆ. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಇಬ್ಬರ ದೂರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page