Friday, June 14, 2024

ಸತ್ಯ | ನ್ಯಾಯ |ಧರ್ಮ

ಉದ್ಯೋಗ ಕೇಳಿದರೆ ಮೌನವಹಿಸಿದ್ದೇಕೆ?: ಕಾಂಗ್ರೇಸ್‌ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ, ಆದರೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿದ್ದು ಕೆಲವಕ್ಕೆ ಮಾತ್ರ. ಅದೂ ಕೂಡ ವ್ಯಾಪಾರಕ್ಕೆ. ಪರೀಕ್ಷೆ ಬರೆದ ಲಕ್ಷಾಂತರ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ, ಉದ್ಯೋಗದ ಆಸೆ ಕಮರುತ್ತಿದೆ. ಕೇಸರಿ ಶಾಲು ಹಂಚುವ, ತ್ರಿಶೂಲ ದೀಕ್ಷೆ ಕೊಡುವ #40PercentSarkara ಉದ್ಯೋಗ ಕೇಳಿದರೆ ಮೌನವಹಿಸಿದ್ದೇಕೆ? ಎಂದು ಕರ್ನಾಟಕ ಕಾಂಗ್ರೇಸ್‌ ಟ್ವೀಟ್‌ ಮಾಡುವ ಮೂಲಕ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದೆ.

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿಮಾಡಿ ಎಂದು ಪ್ರತಿಭಟನೆ ಮಾಡುತ್ತಿರುವ ಉದ್ಯೋಗಾಕಾಂಕ್ಷಿಗಳು ಲಂಚತಗೊಳ್ಳಿ ಕೆಲಸ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದ್ದು ಈ ಕುರಿತು ಕರ್ನಾಟಕ ಕಾಂಗ್ರೇಸ್‌ ಟ್ವೀಟ್‌ ಮೂಲಕ ವೀಡಿಯೋ ಹಂಚಿಕೊಂಡು ಫ್ರಿಡಂ ಪಾರ್ಕ್‌ನಲ್ಲಿ ಜನರು ನಿಮ್ಮ ಸ್ಪಂದನೆಗೆ ಕಾಯುತ್ತಿದ್ದಾರೆ, ಸರ್ಕಾರ ಅಸಲಿ ಜನಸ್ಪಂದನೆ ತೋರುವ ಸಮಯವಿದು. ಈ ಜನಸ್ಪಂದನೆಗೆ ಎಷ್ಟು ಕಮಿಷನ್ ನೀಡಬೇಕು? ಎಂದು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕುರಿತು ಪ್ರಶ್ನೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು