Home ದೇಶ ನಿಮಗೆ ಬಿಸ್ಲರಿ ನೀರು, ಜನರಿಗೆ ವಿಷ ಬೆರೆತ ನೀರೇ? – ತನ್ನದೇ ಪಕ್ಷದ ಸರ್ಕಾರದ ವಿರುದ್ಧ...

ನಿಮಗೆ ಬಿಸ್ಲರಿ ನೀರು, ಜನರಿಗೆ ವಿಷ ಬೆರೆತ ನೀರೇ? – ತನ್ನದೇ ಪಕ್ಷದ ಸರ್ಕಾರದ ವಿರುದ್ಧ ಉಮಾ ಭಾರತಿ ಕಿಡಿ

0

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರಿನಿಂದಾಗಿ 15 ಜನರು ಮೃತಪಟ್ಟ ಘಟನೆಯ ಬಗ್ಗೆ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರದಲ್ಲಿರುವವರು ತಾವು ಮಾತ್ರ ‘ಬಿಸ್ಲರಿ’ ನೀರನ್ನು ಕುಡಿಯುತ್ತಾ, ಜನರಿಗೆ ಕನಿಷ್ಠ ಕುಡಿಯುವ ನೀರನ್ನು ಒದಗಿಸದೆ ವಿಷಪೂರಿತ ನೀರು ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಈ ಘಟನೆಗೆ ಕಾರಣರಾದ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇವಲ ವಿವರಣೆ ನೀಡುವುದರಿಂದ ಅಥವಾ ಕ್ಷಮೆಯಾಚಿಸುವುದರಿಂದ ಈ ಪಾಪ ತೊಳೆದು ಹೋಗುವುದಿಲ್ಲ ಎಂದು ಉಮಾ ಭಾರತಿ ಹೇಳಿದ್ದಾರೆ. ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಪ್ರಶಸ್ತಿ ಪಡೆದ ಇಂದೋರ್‌ನಲ್ಲಿ ವಿಷಕಾರಿ ನೀರಿನಿಂದ ಸಾವುಗಳು ಸಂಭವಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಟುಂಬಗಳು ತಮ್ಮ ಆತ್ಮೀಯರನ್ನು ಕಳೆದುಕೊಂಡು ಜೀವನಪರ್ಯಂತ ಶೋಕದಲ್ಲಿರುವಾಗ, ಅವರ ಪ್ರಾಣದ ಬೆಲೆ ಕೇವಲ 2 ಲಕ್ಷ ರೂಪಾಯಿ ಆಗಲು ಸಾಧ್ಯವಿಲ್ಲ ಎಂದು ಸರ್ಕಾರ ನೀಡಿದ ಪರಿಹಾರದ ಮೊತ್ತವನ್ನು ಅವರು ವಿಮರ್ಶಿಸಿದ್ದಾರೆ. ಈ ಪಾಪಕ್ಕೆ ಖಂಡಿತವಾಗಿಯೂ ಪ್ರಾಯಶ್ಚಿತ್ತ ನಡೆಯಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

You cannot copy content of this page

Exit mobile version