Friday, June 14, 2024

ಸತ್ಯ | ನ್ಯಾಯ |ಧರ್ಮ

ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಶಮಿ ಬದಲು ಉಮೇಶ್‌ ಯಾದವ್:‌ ಬಿಸಿಸಿಐ

ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಿಂದ ಮೊಹಮ್ಮದ್‌ ಶಮಿ ಅವರು ಹೊರಗುಳಿದಿರುವ ಕಾರಣ ಭಾರತ ತಂಡಕ್ಕೆ ಉಮೇಶ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು  ಭಾರತ  ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಕೋವಿಡ್ -19 ಕಾರಣದಿಂದ ಸರಣಿಯಿಂದ ಹೊರಗುಳಿದ ನಂತರ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಗೆ ವೇಗಿ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆಮಾಡಲಾಗಿದೆ ಎಂದು ಬಿಸಿಸಿಐ  ಭಾನುವಾರ ಪ್ರಕಟಿಸಿದೆ.

ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ಪ್ರಾರಂಭವಾಗುವ ಸರಣಿಯ ಮೊದಲು ತಂಡದ ಆಟಗಾರರಿಗೆ ಕೋವಿಡ್ -19 ಪರೀಕ್ಷೆ ಮಾಡಿಸಲಾಗಿದ್ದು, ಪರೀಕ್ಷೆಯಲ್ಲಿ ಮೊಮಮ್ಮದ್‌ ಶಮಿ ಅವರಿಗೆ ಕೋವಿಡ್‌ ದೃಢ ಎಂದು ವರದಿ ಬಂದ ನಂತರ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಮುಂಬರುವ ಟಿ 20 ವಿಶ್ವಕಪ್‌ ನಲ್ಲಿ ಮೊಹಮದ್‌ ಶಮಿ ಅವರು ಭಾಗವಹಿಸಲಿದ್ದು, ವಿಶ್ವ ಚಾಂಪಿಯನ್‌ ಎಂದೆನಿಸಿಕೊಂಡಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯಲ್ಲಿ ಶಮಿ ಅವರು ತಮ್ಮ ಕೌಶಲ್ಯವನ್ನು ಹೇಗೆ ಪ್ರದರ್ಶಿಸಲಿದ್ದಾರೆ ಎಂದು ತಿಳಿಯಲು ಬಿಸಿಸಿಐ ಕಾದಿತ್ತು, ಆದರೆ ಶಮಿ ಅವರಿಗೆ ಕೋವಿಡ್‌ ದೃಢವಾದ ಕಾರಣ ಬಿಸಿಸಿಐಗೆ ನಿರಾಸೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು