Sunday, July 27, 2025

ಸತ್ಯ | ನ್ಯಾಯ |ಧರ್ಮ

ಲಿಂಗ ಸಮಾನತೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ – ಮನೋಹರ್ ಯಲವರ್ತಿ


ಹಾಸನ:
ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ. ಲಿಂಗವೂ ಜೈವಿಕವಾದ ಮತ್ತು ಪ್ರಕೃತಿ ಸಹಜಗುಣವಾಗಿಯೂ, ಜಂಡರ್ ಎನ್ನುವುದು ಒಂದು ಆಚರಣೆಯಾಗಿದೆ ಎಂದು ಸಂಗಮ ಕಾರ್ಯಕರಣಿ ನಿರ್ದೇಶಕರು ಮನೋಹರ್ ಯಲವರ್ತಿ ತಿಳಿಸಿದರು.


ನಗರದ ಸ್ವಾಭಿಮಾನಿ ಭವನದಲ್ಲಿ ಸಂಗಮ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಕುಟುಂಬದ ಸದಸ್ಯರಿಗೆ ಸನ್ಮಾನ ಮತ್ತು ಪ್ರಗತಿಪರ ಸಂಘಟನಕಾರರಿಗೆ ಮನವರಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳ್ಳ ಲಿಂಗ ಎಂಬುದಾಗಿ ಲಿಂಗವು ಸೃಷ್ಟಿ ಯ ಸಹಜ ಸ್ಥಿತಿ. ದೈಹಿಕ ರಚನೆ ಹಾಗೂ ಸಂತಾನೀತ್ಪತಿಯ ಕ್ರಿಯೆಗಳಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಜನಿಂಗದ ಬೆಳವಣಿಗೆ ಹಾಗೂ ಸಮಾಜ ಜೀವನಕ್ಕೆ ಬಹಳ ಮುಖ್ಯ ಎಂದರು. ಹೆಣ್ಣು ಗಂಡುಗಳಲಿ ಲಿಂಗತ್ವ” ಎಂದರೆ ಗಂಡು ಅಥವಾ ಹೆಣ್ಣು ಎಂದು ಗುರುತಿಸಿಕೊಳ್ಳುವುದು ಅಥವಾ ಸಾಮಾಜಿಕವಾಗಿ ಲಿಂಗವನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದನ್ನು ಸೂಚಿಸುತ್ತದೆ. ಇದು ಜೈವಿಕ ಲೈಂಗಿಕತೆಯಿಂದ ಭಿನ್ನವಾಗಿದೆ ಮತ್ತು ಸಾಮಾಜಿಕವಾಗಿ ನಿರ್ಮಿತವಾದ ಪರಿಕಲ್ಪನೆಯಾಗಿದೆ. ಲಿಂಗ ಅಂದರೆ ಹೆಣ್ಣು ಇಲ್ಲವೆ ಗಂಡು ಎಂದು ತಿಳಿಯುವುದು. ಲಿಂಗಕ್ಕೆ ಸಂಬಂಧಿಸಿದಂತೆ ಲಿಂಗತ್ವ ಆಂಗ್ಲದ (ಜೆಂಡರ್)ವಾಗಿದೆ. ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ.

ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ಲಿಂಗ ಎಂಬುದಾಗಿ ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. ಲಿಂಗವು ಸೃಷ್ಟಿಯ ಸಹಜ ಸ್ಥಿ ತಿ. ದೈಹಿಕ ರಚನೆ ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ. ಈ ರೀತಿ ಜೈವಿಕವಾಗಿ ಬಂದಿರುವ ಲಿಂಗವು ಪಕೃತಿದತ್ತವಾದ ಗುಣವಾಗಿದ್ದು ಜನಾಂಗದ ಬೆಳವಣಿಗೆ ಹಾಗೂ ಸಮಾಜ ಜೀವನಕ್ಕೆ ಬಹಳ ಮುಖ್ಯ. ಹೆಣ್ಣು ಗಂಡುಗಳಲ್ಲಿ ಕೆಲವೊಂದು ವಿಶೇಷ ಗುಣಲಕ್ಷಣಗಳು, ಕ್ರೋಮೋಸೋಮುಗಳು, ದೇಹ ರಚನೆ ಹಾಗೂ ಸಂತಾನೋತ್ಪತಿಯ ವಿಶೇಷತೆ ಇರುವುದು ಜೈವಿಕ ಗುಣ.ಆದರೆ ಸ್ತ್ರೀ- ಪುರುಷರ ನಡುವೆ ಅಸಮಾನತೆ ಮತ್ತು ಭೇದ ಭಾವಗಳು ಜೈವಿಕ ಹುಟ್ಟಿನಿಂದ ಬಂದಿಲ್ಲ. ಆದರೆ ಅದು ಒಂದು ಸಾಮಾಜಿಕ ಸಂಸ್ಕೃತಿ ಆಚರಣೆಗೆ ತರುತ್ತದೆ. ಆದುದರಿಂದ ಲಿಂಗವೂ ಜೈವಿಕವಾದ ಮತ್ತು ಪ್ರಕೃತಿ ಸಹಜಗುಣವಾಗಿಯೂ, ಜಂಡರ್ ಎನ್ನುವುದು ಒಂದು ಆಚರಣೆಯಾಗಿದೆ ಎನ್ನಬಹುದು ಎಂದು ಹೇಳಿದರು. ಅರಕಲಗೂಡು ತಾಲ್ಲೂಕಿನ ಕವನ ಎಂಬ ಟ್ರಾನ್ಸ್ ಮಹಿಳೆ ಮತ್ತು ಅವರ ಚಿಕ್ಕಮ್ಮ ದಾಕ್ಷಾಯಿಣಿ ಮತ್ತು ಚೆನ್ನರಾಯಪಟ್ಟಣ ತಾಲ್ಲೂಕಿನ ಕಾವ್ಯ ಎಂಬ ಅಂತರಲಿಂಗಿ ಸಮುದಾಯದವರು ಮತ್ತು ಅವರ ತಾಯಿ ರಾಧ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಗಮ ಕಾರ್ಯಕ್ರಮದ ನಿರ್ದೇಶಕರಾದ ನಿಶಾ ಗೊಲುರು, ದಾಕ್ಷಾಯಿಣಿ, ರಾಧ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page