Wednesday, June 25, 2025

ಸತ್ಯ | ನ್ಯಾಯ |ಧರ್ಮ

ವೈದ್ಯೆ ಮೇಲೆ ಅತ್ಯಾ*ರಕ್ಕೆ ಮುಂದಾದ ಅಪರಿಚಿತ ವ್ಯಕ್ತಿ; ಸ್ವಲ್ಪದರಲ್ಲೇ ತಪ್ಪಿದ ಮತ್ತೊಂದು ದುರಂತ : ವಿಡಿಯೋ ವೈರಲ್

ಪಶ್ಚಿಮ ಬಂಗಾಳದಲ್ಲಿ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಮತ್ತೊಂದು ಅಸಹ್ಯಕರ ಬೆಳವಣಿಗೆ ನಡೆದಿದ್ದು, ಕರ್ತವ್ಯನಿರತ ವೈದ್ಯೆಯ ಎದುರು ಯುವಕನೊಬ್ಬ ತನ್ನ ಗುಪ್ತಾಂಗ ಪ್ರದರ್ಶನ ಮಾಡಿದ ವಿಡಿಯೋ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ PHC ಒಳಗೆ ಕರ್ತವ್ಯನಿರತರಾಗಿದ್ದ ವೈದ್ಯೆಯ ಬಳಿ ಬಂದ ವಿಕೃತ ಕಾಮಿಯೊಬ್ಬ ತನ್ನ ಶಿಶ್ನವನ್ನು ಬಹಿರಂಗವಾಗಿ ತೋರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಅಪರಿಚಿತ ವ್ಯಕ್ತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ನಂತರ ಮಹಿಳಾ ವೈದ್ಯೆ ಚಾಕು/ಕತ್ತರಿ (ವೈದ್ಯಕೀಯ ಉಪಕರಣ) ತಗೆದುಕೊಂಡ ನಂತರ ಆ ವ್ಯಕ್ತಿ ಸೈಕಲ್ ಏರಿ ಪರಾರಿಯಾಗಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ ಮಹಿಳೆಯರ ಮೇಲಿನ ಅಪರಾಧದ ವಿಷಯದಲ್ಲಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳು ಭಿನ್ನವಾಗಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಟೀಕೆಗೆ ಒಳಗಾಗಿದೆ.

ಘಟನೆ ನಡೆದ ನಿಖರವಾದ ಜಾಗದ ಬಗ್ಗೆ ಸಧ್ಯ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಧ್ಯಕ್ಕೆ ಸಿಕ್ಕ ಮಾಹಿತಿಯಂತೆ ಇದು ಪಶ್ಚಿಮ ಬಂಗಾಳದಲ್ಲಿ ನಡೆದುದು ಎಂದು ತಿಳಿದು ಬಂದಿದೆ.

https://www.instagram.com/reel/C-miXNiIvZh/?igsh=MXRseHNmanc2MXM0Ng==

Related Articles

ಇತ್ತೀಚಿನ ಸುದ್ದಿಗಳು

You cannot copy content of this page