Wednesday, June 26, 2024

ಸತ್ಯ | ನ್ಯಾಯ |ಧರ್ಮ

ಉತ್ತರ ಪ್ರದೇಶ: ಭೀಕರ ಮಳೆಗೆ 25 ಬಲಿ, ಶಾಲೆಗಳಿಗೆ ರಜೆ ಘೋಷಣೆ

ಉತ್ತರಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಹಲವೆಡೆ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರಪ್ರದೇಶ: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಇನ್ನಿಲ್ಲದ ಅನಾಹುತಗಳನ್ನು ಸೃಷ್ಟಿಸಿದ್ದು, ಜನರ ಮನೆಮಾರುಗಳನ್ನು ಹಾಳುಮಾಡುವುದರ ಜೊತೆಗೆ ಈ ಮಳೆ 25 ಜನರ ಪಾಲಿಗೆ ಯಮನಾಗಿ ಪರಿವರ್ತನೆಗೊಂಡಿದೆ.

ಕಳೆದ 48 ಗಂಟೆಗಳ ಕಾಲ ಸುರಿದ ಭೀಕರ ಮಳೆಗೆ ಹೊಳೆ-ನದಿಗಳು ಉಕ್ಕಿ ಹರಿಯುತ್ತಿದ್ದು, ರಾಜ್ಯದೆಲ್ಲೆಡೆ ಪ್ರವಾಹ ಸ್ಥಿತಿ ಉಂಟಾಗಿದೆ. ಜನರು ಸುರಿಯುವ ಮಳೆಗೆ ತತ್ತರಿಸುತ್ತಿರುವಾಗಲೇ ರಾಜ್ಯದ ಹವಾಮಾನ ಇಲಾಖೆಯು ಇನ್ನೆರಡು ದಿನದ ತೀವ್ರ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಈ ಸುರಿಯುವ ಮಳೆಯು ಮಕ್ಕಳಿಗೆ ಸಾಲು ಸಾಲು ರಜೆಯನ್ನೂ ಹೊತ್ತು ತಂದಿದ್ದು, ಭಾರಿ ಮಳೆಯಿಂದಾಗಿ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿರುವುದರಿಂದಾಗಿ, ಲಖನೌ, ನೋಯ್ಡಾ, ಗಾಜಿಯಾಬಾದ್, ಕಾನ್ಪುರ್, ರಾಂಪುರ ಮತ್ತು ಮೀರತ್‌ನಲ್ಲಿ ಶಾಲಾ- ಕಾಲೇಜುಗಳಿಗೆ 2 ದಿನಗಳ ಕಾಲ ರಜೆ ಘೋಷಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು