ಉತ್ತರ ಪ್ರದೇಶ: ಮೈನ್‌ಪುರಿಯ ಬೇವಾರ್ ಬ್ಲಾಕ್‌ನಲ್ಲಿರುವ ನಾಗ್ಲಾ ನಾಥಪುರ ಗ್ರಾಮ ಪಂಚಾಯತ್‌ಗೆ ಇನ್ನೂ ಮೂಲಭೂತ ನಾಗರಿಕ ಸೌಲಭ್ಯಗಳ ಕೊರತೆಯಿದೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿಮಾಡಿದೆ.
ಸಮಸ್ಸೆಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮಸ್ಥರು,ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ, ನಮ್ಮ ಗ್ರಾಮಕ್ಕೆ ಯಾವುದೇ ಪಕ್ಕಾ ರಸ್ತೆ ಇಲ್ಲ. ನಾವು ಮುಖ್ಯ ರಸ್ತೆಗೆ ಹೋಗಲು ನಾವು ಎಷ್ಟೋ ಹೊಲಗಳನ್ನು ದಾಟಬೇಕು, ಯಾರಿಗಾದರೂ ಕಾಯಿಲೆ ಬಿದ್ದರೆ ರಸ್ತೆ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ಕಷ್ಟವಾಗುವುದರಿಂದ ಪ್ರಾಣ ಉಳಿಸಲು ಸಾಧ್ಯವಾಗುತ್ತಿಲ್ಲ. ಮನೆ ಬಾಗಿಲಿಗೆ ದೂರು ನೀಡಿದರೂ ಯಾರೂ ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ, ನಮ್ಮ ಗ್ರಾಮ ನಕ್ಷೆಯಲ್ಲಿಯೂ ಸಹ ಇಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮುಖ್ಯ ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್, ನಾವು ಇಡೀ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಇಲ್ಲಿಯವರೆಗೆ ಗ್ರಾಮಕ್ಕೆ ಏಕೆ ದಾರಿ ಮಾಡಲಿಲ್ಲ ಎಂದು ಕಂಡುಹಿಡಿಯಲಾಗುತ್ತಿದೆ, ಗ್ರಾಮಕ್ಕೆ ಪಕ್ಕಾ ರಸ್ತೆಗಳನ್ನು ಸಹ ಮಾಡಲಾಗುವುದು ಹಾಗೂ ಗ್ರಾಮಸ್ಥರಿಗೆ ಮನೆ ನೀಡಲು ಸರ್ಕಾರ ಶ್ರಮಿಸುತ್ತಿದೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.