Friday, May 16, 2025

ಸತ್ಯ | ನ್ಯಾಯ |ಧರ್ಮ

ಸಾರ್ವಜನಿಕ ಶೌಚಾಲಯ ಕುಡಿಯುವ ನೀರು, ಕೆರೆ ನಿರ್ವಹಣೆ, ಜಾಗೃತಿ ಮೂಡಿಸಿ ಉಪ ಲೋಕಾಯುಕ್ತ ಫಣೀಂದ್ರ ಸೂಚನೆ

ಹಾಸನ : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗುರುವಾರ ನಗರದ ಮಹಾರಾಜ ಪಾರ್ಕ್, ಸಿಟಿ ಬಸ್ ನಿಲ್ದಾಣ, ಸತ್ಯಮಂಗಲ ಮತ್ತು ಹುಣಸಿನ ಕೆರೆ, ಮಿನಿ ವಿಧಾನ ಸೌಧದ ಬಳಿ ಇರುವ ಕುಡಿಯುವ ನೀರಿನ ಘಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಮಿಂಚಿನ ಸಂಚಾಲ ಮಾಡಿ ಪರಿಶೀಲಿಸಿದಲ್ಲದೇ ಸ್ಥಳದಲ್ಲಿದ್ದ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ನಿರ್ವಹಿಸಿದ ಬಗ್ಗೆ ನನಗೆ ಕೂಡಲೇ ಮಾಹಿತಿ ಕೊಡುವಂತೆ ಹೇಳಿದರು.


ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪಲೋಕಾಯುಕ್ತರು, ಮೊದಲು ಮಹಾರಾಜ ಉದ್ಯಾನವನಕ್ಕೆ ಭೇಟಿ ನೀಡಿ ಉಪ ಲೋಕಾಯುಕ್ತರು, ಇಲ್ಲಿ ಪ್ರತಿದಿನ ಜನರು ವಾಯು ವಿಹಾರಕ್ಕೆ ಹಾಗೂ ಯೋಗ, ಜಿಮ್, ಆಟೋಟಕ್ಕೆ ನೂರಾರು ಜನರು ಆಗಮಿಸುತ್ತಾರೆ ಅವರಿ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯ ಒಗಿಸಬೇಕು. ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಒದಗಿಸಲು ಹಾಗೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶೌಚಾಲಯ ಸ್ವಚ್ಚತೆಗೆ ಕ್ರಮವಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಪಾರ್ಕ್ನಲ್ಲಿ ಇರುವ ಹಯ ಶೌಚಾಲಯದ ಬೀಗ ತೆಗೆದು ಸ್ವಚ್ಚತೆಗೆ ತಕ್ಷಣ ಕ್ರಮವಹಿಸಿ ಸಾರ್ವಜನಿಕರ ಬಳಕೆಗೆ ಕಲ್ಪಿಸಿ, ಪಾರ್ಕ್ನಲ್ಲಿ ಇರುವ ಮತ್ಯಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾರ್ಕ್ನಲ್ಲಿ ಇರುವ ಯೋಗಾ ಕೇಂದ್ರದ ಬಳಿ ಒಂದು ಬದಿಯಲ್ಲಿ ಮಾತ್ರ ತಂತಿ ಬೇಲಿ ಅಳವಡಿಸಿದೆ ಅದೇ ರೀತಿ ಇನ್ನೊಂದು ಬದಿಯಲ್ಲಿ ತಂತಿ ಬೇಲಿ ಹಾಕಿ ಒಂದು ಗೇಟ್ ಅಳವಡಿಸುವಂತೆ ತಿಳಿಸಿದರು. ಮಕ್ಕಳ ಆಟಿಕೆಗಳನ್ನು ಅಳವಡಿಸಿರುವ ಸ್ಥಳದಲ್ಲಿ ತಗ್ಗು ಇರುವ ಕಡೆ ಮಣ್ಣು ತುಂಬಿಸಿ ಸಮತಟ್ಟು ಮಾಡಿಸಲು ಕ್ರಮವಹಿಸುವಂತೆ ಸೂಚಿಸಿದರು. ಮಕ್ಕಳು ಆಟವಾಡುವ ಸ್ಥಳದಲ್ಲಿ ದೊಡ್ಡವರು ಆಟವಾಡಬಾರದು. ಪಾರ್ಕ್ನಲ್ಲಿ ವಾಕ್ ಮಾಡುವ ಸಾರ್ವಜನಿಕರಿಗೆ ತೊಂದರೆಯಾಗದAತೆ ವಿದ್ಯುತ್ ಸಂಪರ್ಕದ ಕೇಬಲ್‌ಗಳು ಮೇಲೆ ಕಾಣಿಸದಂತೆ ಮುಚ್ಚಿಸಲುಕ್ರಮ ವಹಿಸಬೇಕು. ಇನ್ನು ಸಂಜೆ ಮತ್ತು ರಾತ್ರಿ ವೇಳೆ ಕೆಲ ಕುಡುಕರು ಕುಡಿದು ಬಾಟಲಿ ಎಸೆಯುತ್ತಿದ್ದಾರೆ ಬಗ್ಗೆ ಸಾರ್ವಜನಿಕರಿಂದ ಸ್ಥಳದಲ್ಲಿ ದೂರುಗಳು ಬಂದಾಗ ತಕ್ಷಣ ಮಾತನಾಡಿದ ಉಪ ಆಯುಕ್ತರು, ಈ ಬಗ್ಗೆ ನಿಗಾವಹಿಸಬೇಕು.

ಎಲ್ಲೆಂದರಲ್ಲಿ ಕಸ ಎಸೆಯದೇ ಕಸದ ಬುಟ್ಟಿಯಲ್ಲಿ ಹಾಕಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕ್ರಮವಹಿಸಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪಾರ್ಕ್ನಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲುಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಪಾರ್ಕ್ನಲ್ಲಿ ಕೆಲ ಹುಡುಗ-ಹುಡುಗಿಯರು ಅಸಬ್ಯ ರೀತಿ ನಡೆದುಕೊಳ್ಳುವುದು ಕಂಡು ಬಂದರೇ ಇಲ್ಲಿ ಕೆಲಸ ಮಾಡುವವರೆ ಮೊಬೈಲ್ನಲ್ಲಿ ಸೆರೆ ಹಿಡಿದು ಅಧಿಕಾರಿಗಳಿಗೆ ತಿಳಿಸಿ, ಇನ್ನು ಪೊಲೀಸÀರನ್ನು ಕೂಡ ಇಲ್ಲಿಹೆ ಹಾಕುವಂತೆ ಸ್ಥಳದಲ್ಲಿದ್ದ ಎಎಸ್ಪಿಗೆ ಸೂಚಿಸಿದರು. ಪಾರ್ಕ್ನಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಜೊತೆಗೆ ಶೌಚಾಲಯ ಬಳಕೆ ನಂತರ ಅಗತ್ಯ ನೀರು ಹಾಕಿ ಸ್ವಚ್ಚತೆಗೆ ಸಹಕಾರ ನೀಡುವಂತೆ ಜನರಿಗೆ ಅರಿವು ಮೂಡಿಸಲು ಸೂಚಿಸಿದರು. ನಾಗರೀಕರು ಸ್ವಚ್ಚಂದವಾಗಿ ವಿಹಾರ ನಡೆಸಲು ಅವಕಾಶ ಕಲ್ಪಿಸಿ ಎಂದು ತಿಳಿಸಿದರು. ಪಾರ್ಕ್ನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಜೊತೆಗೆ ಸೈನ್ ಬೋರ್ಡ್ ಅಳವಡಿಸಲು ಸೂಚಿಸಿದರು. ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯಕ್ರಮ ವಹಿಸುವಂತೆ ತಿಳಿಸಿದರು. ಪಾರ್ಕ್ಗೆ ಹೆಚ್ಚಿನ ಕುಡುಕರು ಬರುತ್ತಾರೆ ಎಂದು ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿ ಅಂತಹವರ ಬಗ್ಗೆ ನಿಗಾವಹಿಸಿ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದರು.


ಇದೆ ವೇಳೆ ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ಅಪರ ನಿಬಂಧಕರಾದ ಪೃಥ್ವಿರಾಜ್ ವೆರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ 02 ಸಹಾಯಕ ನಿಬಂಧಕರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ. ಶುಭವೀರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ. ದಾಕ್ಷಾಯಿಣಿ, ಸಿವಿಲ್ ನ್ಯಾಯಾಧೀಶರು ಹಾಗೂ ಉಪಯೋಕಾಯುಕ್ತ ರವರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲ, ಕರ್ನಾಟಕ ಲೋಕಾಯುಕ್ತದ ಹಾಸನ ವಿಭಾಗದ ಪೊಲೀಸ್ ಅಧಿಕ್ಷಕರಾದ ಪಿ.ವಿ. ಸ್ನೇಹ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ತಮ್ಮಯ್ಯ, ಸಿ.ಕೆ. ಹರೀಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page