Tuesday, August 19, 2025

ಸತ್ಯ | ನ್ಯಾಯ |ಧರ್ಮ

ದರ್ಶನ್ ಪ್ರಕರಣ|ನಟ ಉಪೇಂದ್ರ ತಾನು ಅಜ್ಞಾನಿಯೆನ್ನುವುದನ್ನು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ: ಚೇತನ ಅಹಿಂಸಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ಜೈಲು ಹಕ್ಕಿಯಾಗಿರುವ ನಟ ದರ್ಶನ ಕುರಿತು ಚಿತ್ರರಂಗದ ಹಲವು ತಾರೆಗಳು ಪ್ರತಿಕ್ರಿಯಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಮೋಹಕ ತಾರೆ ರಮ್ಯಾ ಅವರು ದರ್ಶನ್‌ ಅವರ ಜನಪ್ರಿಯತೆಯ ಕುರಿತು ಹೇಳಿಕೆ ನೀಡಿ ಅವರಿಗೆ ಇಲ್ಲದ ಜನಪ್ರಿಯತೆಯನ್ನು ಇದೆಯೆಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದರು. ಅತ್ತ ರಚಿತಾ ರಾಮ್‌ ದರ್ಶನ್‌ ಇಂತಹ ಕೆಲಸ ಮಾಡಿದ್ದಾರೆಂದರೆ ನಂಬುವುದಕ್ಕೇ ಆಗುವುದಿಲ್ಲ. ವಿಷಯ ಏನೇ ಇರಲಿ ಪ್ರಕರಣದ ಕುರಿತು ನ್ಯಾಯಯುತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಅವರು ಹೇಳಿದ್ದರು. ಜೊತೆಗೆ ಮಾಧ್ಯಮದವರು ವರದಿಗಾರಿಕೆಯಲ್ಲಿ ಸಂಯಮ ತೋರಬೇಕು ಎಂದೂ ಕೋರಿದ್ದರು.

ಇವರ ನಂತರ ನಟ ಹಾಗೂ ಪ್ರಜಾಕೀಯ ರೂವಾರಿ ಉಪೇಂದ್ರ ಈ ಕುರಿತು ಪ್ರತಿಕ್ರಿಯಿಸಿ, “ಪ್ರಕರಣದ ತನಿಖೆಯ ವಿಷಯದಲ್ಲಿ ದರ್ಶನ್‌ ಅಭಿಮಾನಿಗಳಿಗೆ ಅನುಮಾನಗಳು ಮೂಡುತ್ತಿದ್ದು, ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಲೈವ್‌ ಆಗಿ ನಡೆಸಬೇಕು” ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿರುವ ನಟ, ವಿಚಾರವಾದಿ ಚೇತನ ಅಹಿಂಸಾ, “

ತನ್ ನಟ ಉಪೇಂದ್ರ ಅವರು ದರ್ಶನ ಪ್ರಕರ್ಣದ ಬಗ್ಗೆ ತಮ್ಮ ಟ್ರೇಡ್‌ಮಾರ್ಕ್‌ ಅಜ್ಞಾನದ ಹೇಳಿಕೆಯನ್ನು ನೀಡಿದ್ದಾರೆ.

ಈ ಪ್ರಕರಣದ ವೀಡಿಯೊ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪೊಲೀಸರುಅಧಿಕೃತವಾಗಿ ಸಾರ್ವಜನಿಕರಿಗೆ ಹಂಚಿಕೊಳ್ಳಬೇಕು ಎಂದು ಉಪೇಂದ್ರ ಸಲಹೆ ನೀಡಿದ್ದಾರೆ. ಅಂತಹ ಪೊಲೀಸ್ ಕ್ರಮವು ಆರೋಪಿಗಳ ಗೌಪ್ಯತೆಯ ಹಕ್ಕಿನ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಮಾನವ ಹಕ್ಕುಗಳಿಗಿಂತ ಮನರಂಜನೆಯೇ ಉಪೇಂದ್ರ ಅವರ ಕಾರ್ಯವಿಧಾನವೆಂದು ತೋರುತ್ತದೆ” ಎಂದು ಕುಟುಕಿದ್ದಾರೆ.

ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧಗಳ ಚರ್ಚೆ ಆರಂಭಗೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page