Tuesday, January 27, 2026

ಸತ್ಯ | ನ್ಯಾಯ |ಧರ್ಮ

ದಲಿತ ಮಹಿಳೆ ಮೇಲೆ ಮೇಲ್ವರ್ಗದ ಜನರ ದೌರ್ಜನ್ಯ, ದಯಾಮರಣ ನೀಡಲಿ ಎಂದು ಮಹಿಳೆ ಅಳಲು

ಹಾವೇರಿ :  ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆ ಮೇಲೆ ಮೇಲ್ವರ್ಗದ ಜನರು ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಜನವರಿ 30ರಂದು ಎಸ್​ಸಿ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಘಟನೆ ಬಗ್ಗೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಗೆ ನೊಂದ ಮಹಿಳೆ ದೂರು ನೀಡಿದ್ದಾಳೆ. ದಿಲ್ಲೆಪ್ಪ, ಗುಡ್ಡಪ್ಪ, ಹನುಮಂತ, ಮಂಜಪ್ಪ, ಸೇರಿದಂತೆ 35 ಕ್ಕೂ ಹೆಚ್ಚು ಜನರ ವಿರುದ್ಧ ನೊಂದ ಮಹಿಳೆ ಜಾತಿ ನಿಂದನೆ ಆರೋಪದಡಿ ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಮಾಧ್ಯಮಗಳ ಮುಂದೆ ಬಂದಿದ್ದು, ದೌರ್ಜನ್ಯವೆಸಗುತ್ತಿರುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ನಮಗೆ ದಯಾಮರಣ ನೀಡಲಿ ಎಂದು ದಲಿತ ಮಹಿಳೆ ಕಣ್ಣೀರಿಟ್ಟಿದ್ದಾಳೆ.

ಈ ಸಂಬಂಧ ಇದೀಗ ಮಹಿಳೆ ಮಾಧ್ಯಮಗಳ ಮುಂದೆ ಬಂದಿದ್ದು, ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೌರ್ಜನ್ಯವೆಸಗಿದವರನ್ನು ಬಂಧಿಸಿಲ್ಲ, ನಮಗೆ ನ್ಯಾಯ ಸಿಕ್ಕಿಲ್ಲ. ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನಮಗೆ ಸಹಾಯ ಮಾಡ್ತಿಲ್ಲ. ಊರಿನ ಸರ್ಕಾರಿ ರಸ್ತೆಯಲ್ಲಿ ಓಡಾಡಲು ನಮಗೆ ಬಿಡುತ್ತಿಲ್ಲ. ಕೊರಳಿಗೆ ಚಿಪ್ಪು, ಕಾಲಿಗೆ ಪೊರಕೆ ಕಟ್ಟಿಕೊಂಡು ಬರುವಂತೆ ಹೇಳುತ್ತಾರೆ. ನಮ್ಮ ಮನೆ ಬೇಲಿ ಬಳಿಗೆ ಬಂದು ಕೆಟ್ಟದಾಗಿ ಸನ್ನೆ ಮಾಡುತ್ತಾರೆ. ‘ನಮ್ಮ ಜೊತೆ ಮಲಗು ಬಾ’ ಎಂದು ಕರೆಯುತ್ತಾರೆಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page