ಉಪ್ಪುಂದದಲ್ಲಿ ನದಿಗೆ ಬಿದ್ದು ಕೊಚ್ಚಿ ಹೋದ 7 ವರ್ಷದ ಬಾಲಕಿ

ಉಪ್ಪುಂದ: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾಲುಸಂಕ ದಾಟುವಾಗ  ಕಾಲುಜಾರಿ  ನದಿಗೆ ಬಿದ್ದು ವಿದ್ಯಾರ್ಥಿನಿ ನೀರುಪಾಲಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಬೊಳಂಬಳ್ಳಿಯ ಮಕ್ಕಿಮನೆ  ಪ್ರದೀಪ್‌ ಪೂಜಾರಿ ಹಾಗೂ ಸುಮಿತ್ರಾ ಅವರ ಏಳು ವರ್ಷದ ಮಗಳು ಸನ್ನಿಧಿ ನೀರುಪಾಲಾಗಿದ್ದು ಸಾರ್ವಜನಿಕರು ಹುಡುಕಾಟ ನಡೆಸುತ್ತಿದ್ದಾರೆ.

ಚಪ್ಪರಿಕೆಯ ಸ.ಹಿ.ಪ್ರಾ.ಶಾಲೆ ಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ  ಶಾಲೆಯಿಂದ ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲುಸಂಕದಿಂದ ಆಯತಪ್ಪಿ ನದಿಗೆ ಬಿದ್ದಿದ್ದಾಳೆ.

ಬೈಂದೂರು ಶಾಸಕ ಬಿ ಎಂ ಸನತ್‌ ಕುಮಾರ್‌ ಶೆಟ್ಟಿ , ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಹಶೀಲ್ದಾರ್‌ ಕಿರಣ್ ಗೋರಯ್ಯ‌, ಬೈಂದೂರು ಪಿಎಸ್‌ ಐ ಪವನ್‌ ನಾಯಕ್‌ ಮೊದಲಾದವರು ಭೇಟಿ ನೀಡಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು