Thursday, August 15, 2024

ಸತ್ಯ | ನ್ಯಾಯ |ಧರ್ಮ

ಮದ್ಯ ನೀತಿ: ಮನೀಶ್ ಸಿಸೋಡಿಯಾಗೆ ಷರತ್ತುಗಳೊಂದಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ದೆಹಲಿ ಮದ್ಯ ಹಗರಣದಲ್ಲಿ 17 ತಿಂಗಳ ಬಳಿಕ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿನಿಂದ ಹೊರಬರಲಿದ್ದಾರೆ. ಸಿಬಿಐ ಮತ್ತು ಇಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ. ಫೆಬ್ರವರಿ 2023ರ ಬಂಧನದ ನಂತರ ಸಿಸೋಡಿಯಾ ಸುಪ್ರೀಂ ಕೋರ್ಟ್‌ಗೆ ತಲುಪಿದ್ದು ಇದು ನಾಲ್ಕನೇ ಬಾರಿ.

ಮೊದಲ ಮೂರು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಸಿಸೋಡಿಯಾ ಅವರ ಜಾಮೀನನ್ನು ತಿರಸ್ಕರಿಸಿತ್ತು.

ದೆಹಲಿ ಮದ್ಯ ಹಗರಣದಲ್ಲಿ ಮನೀಶ್ ಸಿಸೋಡಿಯಾ ಹಣ ಪಡೆದು ಪಾಲಿಸಿ ತಯಾರಿಸಿದ ಆರೋಪ ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಹೊಸ ಮದ್ಯ ನೀತಿ ಜಾರಿಯಾದ ಸಂದರ್ಭದಲ್ಲಿ ಸಿಸೋಡಿಯಾ ಅವರು ಅಬಕಾರಿ ಖಾತೆ ಸಚಿವರಾಗಿದ್ದರು. ಈ ಮದ್ಯ ನೀತಿಯು 2022ರಲ್ಲಿ ಬಂದಿತು.

ಸಿಸೋಡಿಯಾಗೆ ಜಾಮೀನು ಸಿಕ್ಕಿದ್ದು ಏಕೆ?

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಮನೀಶ್ ಸಿಸೋಡಿಯಾ ಅವರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅಕ್ಟೋಬರ್ 2023ರಲ್ಲಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು. ಸಿಸೋಡಿಯಾ ಪ್ರಕರಣದ ವಿಚಾರಣೆಯನ್ನು 6-8 ತಿಂಗಳೊಳಗೆ ಪ್ರಾರಂಭಿಸದಿದ್ದರೆ, ಜಾಮೀನು ಪರಿಗಣಿಸಬಹುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತ್ತು.

ಈ ಪ್ರಕರಣದಲ್ಲಿ 17 ತಿಂಗಳಿನಿಂದ ಕಕ್ಷಿದಾರ ಜೈಲಿನಲ್ಲಿದ್ದಾರೆ, ಸಿಬಿಐ-ಇಡಿ ತನಿಖೆಯಲ್ಲಿ ಏನೂ ಹೊರಬರುತ್ತಿಲ್ಲ ಎಂದು ಸಿಂಘ್ವಿ ಹೇಳಿದರು. ಇವು ನೀತಿ ರಚನೆ ವಿಷಯಗಳ ಮೇಲೆ ಮಾಡಿರುವ ಆರೋಪಗಳು, ಹೀಗಾಗಿ ಅವರನ್ನು ಹೆಚ್ಚು ಕಾಲ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.

ಆದರೆ, ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಹಲವು ಷರತ್ತುಗಳನ್ನೂ ವಿಧಿಸಿದೆ. ಇವುಗಳಲ್ಲಿ ಪಾಸ್‌ಪೋರ್ಟ್ ಸರೆಂಡರ್ ಮಾಡುವುದು, ಪ್ರತಿ ಸೋಮವಾರ ಐಒಗೆ ವರದಿ ಮಾಡುವುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರದಿರುವುದು ಸೇರಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page