Wednesday, August 14, 2024

ಸತ್ಯ | ನ್ಯಾಯ |ಧರ್ಮ

ಯುಪಿಎಸ್‍ಸಿ ಅಧ್ಯಕ್ಷ ಮನೋಜ್ ಸೋನಿ ಅವಧಿಗೂ ಮೊದಲೇ ರಾಜೀನಾಮೆ

ಯುಪಿಎಸ್‍ಸಿ ಅಧ್ಯಕ್ಷ ಮನೋಜ್ ಸೋನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಅಧಿಕಾರ ಇನ್ನೂ 5 ವರ್ಷಗಳ ಕಾಲ, ಎಂದರೆ 2029ರ ಮೇ ತಿಂಗಳ ತನಕ ಬಾಕಿಯಿತ್ತು. ಸೋನಿ ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆಯಾದರೂ, UPSC ಆಡಳಿತದಲ್ಲಿನ ಗೊಂದಲಗಳಿಂದಾಗಿ ಅದು ಸುದ್ದಿಯಲ್ಲಿರುವ ಸಮಯದಲ್ಲೇ ಮುಂದೆ ಬಂದಿರುವ ಈ ರಾಜೀನಾಮೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಸೋನಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿಷಯಕ್ಕೂ ತನ್ನ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಯುಪಿಎಸ್‍ಸಿ ಅಧ್ಯಕ್ಷರು ಹದಿನೈದು ದಿನಗಳ ಹಿಂದೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಅದನ್ನು ಇನ್ನೂ ಅಂಗೀಕರಿಸಲಾಗಿಲ್ಲ ಎಂದು ಮೂಲವೊಂದು ತಿಳಿಸಿದೆ. ಪ್ರಖ್ಯಾತ ಶಿಕ್ಷಣ ತಜ್ಞರಾದ ಸೋನಿ, 59, ಜೂನ್ 28, 2017ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡರು. ಅವರು ಮೇ 16, 2023ರಂದು ಯುಪಿಎಸ್‍ಸಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಅವರ ಅವಧಿಯು ಮೇ 15, 2029ರಂದು ಕೊನೆಗೊಳ್ಳಲಿದೆ.

ಇದೇ 23ರಿಂದ ಸಂಸತ್‌ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಸೋನಿಯವರ ರಾಜೀನಾಮೆ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಈಗಾಗಲೇ ನೀಟ್‌ ಮುಂತಾದ ಪರೀಕ್ಷೆಗಳಲ್ಲಿನ ಗೊಂದಲ ಮತ್ತು ಹಗರಣಗಳಿಂದಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಈಗ ಈ ರಾಜೀನಾಮೆ ಅದನ್ನು ಇನ್ನಷ್ಟು ಮುಜುಗರಕ್ಕೆ ಒಳಪಡಿಸುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page