ನಾವೇ ಅತಿದೊಡ್ಡ ಭಯೋತ್ಪಾದಕರು: ಅಮೆರಿಕದ ಮಾಜಿ ಉಗ್ರ ನಿರೋಧಕ ಅಧಿಕಾರಿ ಜೋಸೆಫಿನ್ ಗಿಲ್ಬೋ

ವಾಷಿಂಗ್ಟನ್: ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯು ಇಡೀ ವಿಶ್ವದ ಮನಃಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ ಎಂದು ಅಮೆರಿಕದ ಮಾಜಿ ಮಿಲಿಟರಿ ಗುಪ್ತಚರ ಮತ್ತು ಭಯೋತ್ಪಾದನಾ ವಿರೋಧಿ ಅಧಿಕಾರಿ ಜೋಸೆಫಿನ್ ಗಿಲ್ಬೋ ತಿಳಿಸಿದ್ದಾರೆ. ಈ ದಾಳಿಯು ಅಮೆರಿಕವು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿ, ಉದ್ದೇಶಪೂರ್ವಕವಾಗಿಯೇ ಜಾರಿಗೆ ತಂದ ಕೃತ್ಯವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುಮಾರು 165 ಬಾಲಕಿಯರನ್ನು ಬಲಿಪಡೆದ ಈ ಭೀಕರ ದಾಳಿಯು ಆಕಸ್ಮಿಕವಾಗಿ ನಡೆದಿದ್ದಲ್ಲ, ಬದಲಿಗೆ ಇದು ಪೂರ್ವಯೋಜಿತ ಬಾಂಬ್ ದಾಳಿಯಾಗಿದೆ. “ವಿಶ್ವದ ಅತಿದೊಡ್ಡ ಭಯೋತ್ಪಾದಕರು ಮತ್ತು ಖಳನಾಯಕರು ನಾವೇ (ಅಮೆರಿಕ)” ಎಂದು ಅವರು ತಮ್ಮ ದೇಶದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಮೆರಿಕದ ರಕ್ಷಣಾ ನೀತಿಗಳು ಅಮಾಯಕ ಜೀವಗಳನ್ನು ಬಲಿಪಡೆಯುತ್ತಿರುವುದರ ವಿರುದ್ಧ ಅವರು ಈ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು