Thursday, August 21, 2025

ಸತ್ಯ | ನ್ಯಾಯ |ಧರ್ಮ

ಅಮೇರಿಕಾ ಸುಂಕ ಏರಿಕೆ ಬಿಕ್ಕಟ್ಟು; ಭಾರತಕ್ಕೆ ಮುಕ್ತ ಆಹ್ವಾನ ನೀಡಿದ ರಷ್ಯಾ

ರಷ್ಯಾದಿಂದ ತೈಲ ಖರೀದಿಸೋದನ್ನು ನಿಲ್ಲಿಸಬೇಕು ಎಂದು ಭಾರತಕ್ಕೆ ಸುಂಕ ಹೆಚ್ಚಳದ ಭಯ ಹುಟ್ಟಿಸಿದ ಅಮೇರಿಕಾವನ್ನು ಹೊಸ ವಸಾಹತುಶಾಹಿ ವರ್ತನೆ ಎಂದು ಬಣ್ಣಿಸಿದ ರಷ್ಯಾ, ಅಮೇರಿಕಾ ಭಾರತಕ್ಕೆ ದುಬಾರಿ ಎನಿಸಿದರೆ ವ್ಯಾಪಾರ, ವಹಿವಾಟಿಗೆ ನಮ್ಮೊಂದಿಗೆ ಬರಬಹುದು ಎಂದು ಮುಕ್ತ ಆಹ್ವಾನ ನೀಡಿದೆ.

‘ಯಾವುದೇ ಏಕಪಕ್ಷೀಯ ನಿರ್ಧಾರಗಳು ಸರಬರಾಜು ಸರಪಳಿಗೆ ಧಕ್ಕೆ ತರುತ್ತವೆ. ಅಭಿವೃದ್ಧಿಶೀಲ ದೇಶಗಳ ಇಂಧನ ಭದ್ರತೆಗೆ ಅಪಾಯ ತರುತ್ತವೆ. ಪಾಶ್ಚಿಮಾತ್ಯ ಶಕ್ತಿಗಳ ವರ್ತನೆ ಹೊಸ ವಸಾಹತುಶಾಹಿ ಧೋರಣೆಯಂತಿದೆ. ಭಾರತದ ಮೇಲೆ ಅವು ಹಾಕುತ್ತಿರುವ ಒತ್ತಡ ನ್ಯಾಯಯುತ ಅಲ್ಲ’ ಎಂದು ರಷ್ಯನ್ ರಾಯಭಾರ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಮುಂದುವರಿದ ಅವರು, ಭಾರತವು ರಷ್ಯನ್ ತೈಲ ಖರೀದಿಸುವುದಕ್ಕೂ ಪಾಶ್ಚಿಮಾತ್ಯ ದೇಶಗಳ ವರ್ತನೆಗೂ ಸಂಬಂಧ ಇಲ್ಲ ಎಂದು ಬೇರಾವುದೋ ಮಸಲತ್ತಿನ ವಾಸನೆಯನ್ನು ಬಾಬುಶ್​ಕಿನ್ ಗ್ರಹಿಸಿದ್ದಾರೆ.

ಭಾರತವು ರಷ್ಯಾದಿಂದ ತೈಲ ಖರೀದಿಸೋದನ್ನು ನಿಲ್ಲಿಸಬಹುದು ಅಂತ ಅನಿಸೋದಿಲ್ಲ. ತಮಗೆ ಭಾರತ ಎದುರಿಸುತ್ತಿರುವ ಸಮಸ್ಯೆ ಏನು ಎಂದು ಗೊತ್ತಿದೆ ಎಂದು ರಷ್ಯನ್ ರಾಜತಾಂತ್ರಿಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page