Thursday, August 21, 2025

ಸತ್ಯ | ನ್ಯಾಯ |ಧರ್ಮ

ವಿ. ಸೋಮಣ್ಣ ಸೋಲಿಗೆ ಸಂಸದ ಪ್ರತಾಪ್​ ಸಿಂಹ ಹೇಳಿಕೆಗಳೇ ಕಾರಣ!

ಕರ್ನಾಟಕ ವಿಧಾನಸಭಾ ಚುನಾವಣೆಯ ಕೆಲವೇ ಕೆಲವು ಹೈವೋಲ್ಟೇಜ್​ ಕ್ಷೇತ್ರಗಳಲ್ಲಿ ಒಂದಾಗಿರುವ ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರದಲ್ಲೂ ವಿ. ಸೋಮಣ್ಣ ಹೀನಾಯವಾಗಿ ಸೋತಿದ್ದು ಇದಕ್ಕೆ ನೇರ ಸಂಸದ ಪ್ರತಾಪ್​ ಸಿಂಹ ಕಾರಣ ಎಂದು ಹೇಳಲಾಗುತ್ತಿದೆ.

ಹೌದು, ಮೈಸೂರು ಜಿಲ್ಲೆ ಸಂಸದೀಯ ವ್ಯಾಪ್ತಿ ಇಲ್ಲದಿದ್ದರೂ ಸೋಮಣ್ಣ ಪರ ವರುಣಾದಲ್ಲಿ ಪ್ರಚಾರಕ್ಕೆ ಬಂದ ಪ್ರತಾಪ್ ಸಿಂಹ ಅವರು, ಬೆಕಾಬಿಟ್ಟಿ ನಾಲಿಗೆ ಹರಿಬಿಟ್ಟು ವರುಣಾ ಮತದಾರರ ಕೆಂಗಣ್ಣಿಗೆ ಗುರಿಯಾದರು. ಕುರುಬ ಸಮುದಾಯವನ್ನು ಗುರಿಯಾಗಿಸಿಕೊಂಡು ಒಂದಷ್ಟು ಹೇಳಿಗಳು, ಲಿಂಗಾಯತ ವಿಷಯವಾಗಿ ರಾಜಕೀಯ ಹೇಳಿಕೆಗಳನ್ನು ನೀಡುವ ಮೂಲಕ ಹಿಂದುಳಿದ ವರ್ಗಗಳ ವಿರೋಧ ಕಟ್ಟಿಕೊಂಡ ಪರಿಣಾಮ ಸೋಮಣ್ಣ ಅವರಿಗೆ ಸೋಲಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಪ್ರಮೂಖ ವಿಷಯವೇನೆಂದರೆ, ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಒಮ್ಮೆಯೂ ಪ್ರತಾಪ್ ಸಿಂಹ ಭೇಟಿ ನೀಡಲಿಲ್ಲ. ಅಲ್ಲದೆ, ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ನಿರಂತರ ವಾಗ್ದಾಳಿ ನಡೆಸಿದ್ದು ವಿ. ಸೋಮಣ್ಣ ಸೋಲಿನ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನಲಾಗಿದೆ.

ಪ್ರಚಾರಕ್ಕೆ ಬಂದಾಗ, ಪ್ರತಾಪ್ ಸಿಂಹ ಹಾಗೂ ಸೋಮಣ್ಣ ಅವರಿಗೆ ಜನರು, ವಸತಿ ಸಚಿವರಾಗಿ ವರುಣಾ ಕ್ಷೇತ್ರಕ್ಕೆ ಎಷ್ಟು ಮನೆಗಳನ್ನು ನೀಡಿದ್ದೀರಿ ಎಂದು ಪ್ರಶ್ನೆಗಳನ್ನು ಮುಂದಿರಿಸಿ ಮುಜುಗರಕ್ಕೆ ಒಳಪಡಿಸಿದ್ದರು. ಈತರದ ಆಡಳಿತ ವಿರೋಧಿ ಅಲೆಯಿಂದಲೂ ವಿ ಸೋಮಣ್ಣ ಸೋತಿದ್ದಾರೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page