Friday, April 18, 2025

ಸತ್ಯ | ನ್ಯಾಯ |ಧರ್ಮ

ನ,11ರಂದು ಕರ್ನಾಟಕಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪಾದಾರ್ಪಣೆ

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು-ಮೈಸೂರು-ಚೆನ್ನೈ ಮಾರ್ಗದಲ್ಲಿ ಸಂಚರಿಸಲಿದ್ದು, ನವೆಂಬರ್ 11 ರಂದು ಕರ್ನಾಟಕದಲ್ಲಿ ಉದ್ಘಾಟನೆಗೊಳ್ಳಲಿದೆ.

ಭಾರತದಲ್ಲಿ ಇದು ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಬೆಂಗಳೂರು ಮತ್ತು ಮೈಸೂರು ಸೇರಿದಂತೆ, ತಮಿಳುನಾಡು ರಾಜಧಾನಿ ಚೆನ್ನೈಗೂ ಕೂಡ ಸಂಪರ್ಕಿಸಲಿದೆ. ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಭಾಗವಾಗಿರುವ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

ವಂದೇ ಭಾರತ್ ರೈಲು ಸೇವೆಗಳು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಪ್ರಯಾಣಿಕರಿಗೆ ಕಡಿಮೆ ಸಮಯ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣ ಒದಗಿಸುವ ನಿರೀಕ್ಷೆಯಿದೆ.

ಭಾರತದಲ್ಲಿ ಇಲ್ಲಿಯವರೆಗೆ ಪ್ರಾರಂಭಿಸಲಾದ ನಾಲ್ಕು ರೈಲುಗಳು ದೆಹಲಿ, ಮುಂಬೈ, ಅಹಮದಾಬಾದ್, ಕಾನ್ಪುರ, ವಾರಣಾಸಿ ಮತ್ತು ಇತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು.

ಕರ್ನಾಟಕದಲ್ಲಿ ಉದ್ಘಾಟನೆಗೊಳ್ಳುವ ಈ ರೈಲು, ಗಂಟೆಗೆ 75 ರಿಂದ 77 ಕಲೋಮೀಟರ್‌ ಸರಾಸರಿ ವೇಗದಲ್ಲಿ ಚಲಿಸುತ್ತದೆ. ಬೆಂಗಳೂರು- ಚನೈಗೆ ಸುಮಾರು 504 ಕಿಲೋಮೀಟರ್‌ ದೂರವಿದ್ದು, ಸುಮಾರು ಆರೂವರೆ ಗಂಟೆಗಳಲ್ಲಿ ಪ್ರಯಾಣಿಕರನ್ನು ತಲುಪಿಸುತ್ತದೆ.

ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಡುವ ಈ ರೈಲು, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ನಿಲ್ದಾಣದಲ್ಲಿ ನಿಲುಗಡೆಗೊಂಡು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಲಿದೆ. ನಂತರ ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 2.25ಕ್ಕೆ ಆಗಮಿಸಿ ರಾತ್ರಿ 7.35ಕ್ಕೆ ಚೆನ್ನೈ ತಲುಪಲಿದೆ.

ಮಾಹಿತಿ ಪ್ರಕಾರ, ಈ ರೈಲು ವಾರದ ಆರು ದಿನಗಳು ಮಾತ್ರ ಸೇವೆಯಲ್ಲಿದ್ದು, ಬುಧವಾರ ಲಭ್ಯವಿರುವುದಿಲ್ಲ. ಇದು ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರ್ ಅನ್ನು ಹಾದುಹೋಗುತ್ತದೆ. ಈ ರೈಲು 16 ಕೋಚ್‌ಗಳನ್ನು ಹೊಂದಿದ್ದು, ಸ್ವಯಂಚಾಲಿತ ಬಾಗಿಲುಗಳು ಮತ್ತು 180 ಡಿಗ್ರಿ ಸುತ್ತುವ ಸೀಟುಗಳನ್ನು ಹೊಂದಿರುತ್ತದೆ.

ನ್ಯೂಸ್ 18 ವರದಿ ಪ್ರಕಾರ ‘ಎಕಾನಮಿ ಕ್ಲಾಸ್’ ನಲ್ಲಿ, ಚೆನ್ನೈ-ಮೈಸೂರು ಮಾರ್ಗದ ಟಿಕೆಟ್‌ಗಳ ಬೆಲೆ ₹921 ಆಗಿದ್ದು, ‘ಎಕ್ಸಿಕ್ಯುಟಿವ್ ಕ್ಲಾಸ್’ ಬೆಲೆ ₹1,880 ಆಗಿರುತ್ತದೆ. ಹೀಗಾಗಿ ಮೈಸೂರು ಮತ್ತು ಬೆಂಗಳೂರು ನಡುವಿನ ಪ್ರಯಾಣ ದರ ಕ್ರಮವಾಗಿ ₹ 368 ಮತ್ತು ₹ 768 ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಹೀಗಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page