Thursday, June 20, 2024

ಸತ್ಯ | ನ್ಯಾಯ |ಧರ್ಮ

ವೇದ ಗಣಿತ : ಕರ್ನಾಟಕ ಸರ್ಕಾರದಿಂದ ಮತ್ತೊಂದು ವಿವಾದ

ಬೆಂಗಳೂರು: ಸರ್ಕಾರವು ಪಠ್ಯ ಪುಸ್ತಕ ಪರಿಷ್ಕರಣೆ ನಂತರ ಇದೀಗ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದೆ. ರಾಜ್ಯದಲ್ಲಿನ ಐದರಿಂದ ಎಂಟನೇ ತರಗತಿಯ SC – ST ಮಕ್ಕಳಿಗೆ ವೇದ ಗಣಿತ ಕಲಿಸಲು ಮುಂದಾಗಿರುವ ಸರಕಾರ ಇದಕ್ಕಾಗಿ SC ST ಕಲ್ಯಾಣಕ್ಕೆ ಮೀಸಲಾದ ಗ್ರಾಮ ಪಂಚಾಯಿತಿಯ ಶೇ. 25ರಷ್ಟು ಹಣವನ್ನು ಇದಕ್ಕಾಗಿ ಬಳಸಲಿದೆ.

ಚಿತ್ರದುರ್ಗದ ಹಿರಿಯೂರಿನ ಖಾಸಗಿ ಸಂಸ್ಥೆ ಎವಿಎಂ ಅಕಾಡೆಮಿಗೆ ವೇದ ಗಣಿತದ ಬೋಧನೆಯನ್ನು ವಹಿಸಲಾಗಿದೆ.

ಎವಿಎಂ ಅಕಾಡೆಮಿ 2022ರ ಜನವರಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಪ್ರಾರಂಭಿಸಿತ್ತು.

ತರಬೇತಿ ಪಡೆದ ಶಿಕ್ಷಕರು 16 ವಾರಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರದಂದು ಎರಡು ಗಂಟೆಗಳ ಕಾಲ ವೇದ ಗಣಿತವನ್ನು ಕಲಿಸುತ್ತಾರೆ.

ಶಾಲಾ ವಿದ್ಯಾರ್ಥಿಗಳಿಗೆ ವೇದ ಗಣಿತವನ್ನು ಕಲಿಸುವುದು ಗೊಂದಲವನ್ನು ಉಂಟು ಮಾಡುತ್ತದೆ. ಏಕೆಂದರೆ ಅವರು ಈಗಾಗಲೇ ಗಣಿತವನ್ನು ವೈಜ್ಞಾನಿಕ ರೀತಿಯಲ್ಲಿ ಕಲಿಯುತ್ತಿದ್ದಾರೆ. ಗಣಿತ ಮಾಯೆಯಲ್ಲ, ಇದು ಶುದ್ಧ ವಿಜ್ಞಾನವಾಗಿದೆ. ಇದನ್ನು ತರ್ಕಬದ್ಧವಾಗಿ ತಾರ್ಕಿಕವಾಗಿ ಕಲಿಯಬೇಕು. ವೇದ ಗಣಿತಕ್ಕೆ ತರ್ಕವಿಲ್ಲ ಸರ್ಕಾರಿ ಶಾಲಾ ಮಕ್ಕಳ ಮೇಲೆ ಮಾತ್ರ ಸರ್ಕಾರ ಅನಗತ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ನಿಜವಾದ ಕೇಸರಿಕರಣ – ನಿರಂಜನಾರಾಧ್ಯ, ಶಿಕ್ಷಣ ತಜ್ಞ

Related Articles

ಇತ್ತೀಚಿನ ಸುದ್ದಿಗಳು