Home ಬೆಂಗಳೂರು ಅನಧಿಕೃತವಾಗಿ ಗಾಡಿಗಳಿಗೆ LED ಲೈಟ್‌ ಹಾಕ್ಸಿದ್ರೆ ಕೇಸು ಗ್ಯಾರಂಟಿ: ಸುತ್ತೋಲೆ ಹೊರಡಿಸಿದ ಸರ್ಕಾರ

ಅನಧಿಕೃತವಾಗಿ ಗಾಡಿಗಳಿಗೆ LED ಲೈಟ್‌ ಹಾಕ್ಸಿದ್ರೆ ಕೇಸು ಗ್ಯಾರಂಟಿ: ಸುತ್ತೋಲೆ ಹೊರಡಿಸಿದ ಸರ್ಕಾರ

0

ಬೆಂಗಳೂರು: ಈಗೀಗ ವಾಹನಗಳಿಗೆ ಕಣ್ಣು ಕುಕ್ಕುವ LED ಮಾದರಿಯ ತೀಕ್ಷ್ಣ ಬೆಳಕು ಚೆಲ್ಲುವ ಲೈಟ್‌ ಹಾಕಿಸುವ ಹವ್ಯಾಸ ತುಸು ಹೆಚ್ಚೇ ಆಗಿದೆ. ಇದರಿಂದಾಗಿ ಎದುರಿನಿಂದ ಬರುವ ವಾಹನ ಸವಾರರಿಗೆ ಎದುರಿನ ರಸ್ತೆಯೇ ಕಾಣ ಪರಿಸ್ಥಿತಿ ಎದುರಾಗುತ್ತದೆ. ಕೆಲವೊಮ್ಮೆ ಇದರಿಂದಾಗಿ ಅಪಘಾತ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಇಂತಹ ತಾತ್ಕಾಲಿಕ ಕುರುಡುತನವನ್ನು ಉಂಟುಮಾಡುವಂತಹ ಲೈಟುಗಳನ್ನು ಆಳವಡಿಸುವವರ ವಿರುದ್ಧ ಸಾರಿಗೆ ಇಲಾಖೆ ತಡವಾಗಿಯಾದರೂ ಎಚ್ಚೆತ್ತುಕೊಂಡಿದು. ಈಗ ಅಂತಹ ವಾಹನಗಳನ್ನು ಕಂಡುಹಿಡಿದು ಅವುಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ವಲಯದ ಅಧಿಕಾರಿಗಳಿಗೆ ಆದೇಶ ನೀಡಿದೆ.

“ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆ (ಸಿಎಂವಿ) ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್‌ಲೈಟ್‌ ಅಳವಡಿಕೆ ಮಾಡಿಕೊಳ್ಳಬೇಕು” ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

You cannot copy content of this page

Exit mobile version