Friday, June 20, 2025

ಸತ್ಯ | ನ್ಯಾಯ |ಧರ್ಮ

ಬಾಲಿವುಡ್‌ ಹಿರಿಯ ನಟ ವಿಕ್ರಮ್‌ ಗೋಖಲೆ ನಿಧನ

ಮುಂಬೈ : ಬಾಲಿವುಡ್‌ ಹಿರಿಯ ನಟ ವಿಕ್ರಮ್‌ ಗೋಖಲೆ ಅವರು ಇಂದು ಮಧ್ಯಾನ ಪುಣೆಯ ಧೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಕ್ರಮ್‌ ಗೋಖಲೆಯವರು, ಪುಣೆಯ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 75 ನೇ ವಯಸ್ಸಿನಲ್ಲಿ ನವೆಂಬರ್‌ 26 ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ.

ಖ್ಯಾತ ನಟ ವಿಕ್ರಮ್‌ ಗೋಖಲೆಯವರು 1971 ರಲ್ಲಿ ಅಮಿತಾಬ್‌ ಬಚ್ಚನ್‌ ಅವರ ಪರ್ವಾನಾ ಚಿತ್ರದ ಮೂಲಕ ಚಿತ್ರರಂಗನಕ್ಕೆ ಹೆಜ್ಜೆ ಇಟ್ಟಿದ್ದ ಇವರು, ಅನೇಕ ಚಲನಚಿತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅಮಿತಾಬ್‌ ಬಚ್ಚನ್‌ ಅವರ ಅಗ್ನಿಪಥ್‌, ʼಹಮ್‌ ದಿಲ್‌ ದೇ ಚುಕೆ ಸನಮ್‌ʼ ಮಿಷನ್‌ ಮಂಗಲ್, ಹಿಚ್ಕಿ , ಬ್ಯಾಂಗ್‌ ಬ್ಯಾಂಗ್‌ , ಅಯಾರಿ,  ಸೇರಿದಂತೆ ಹಲವಾರು ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ನಲವತ್ತು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಹಲವಾರು ಟಿವಿ ಶೋಗಳಲ್ಲಿ ನಟಿಸಿದ್ದಾರೆ.

2010 ರಲ್ಲಿ, ಇವರ ಮರಾಠಿ ಚಲನಚಿತ್ರದಲ್ಲಿ ಇವರ ಪರಿಶ್ರಮಕ್ಕೆ ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಮರಾಠಿ ಚಿತ್ರ ʼಆಘಾತ್ʼ ಮೂಲಕ ನಿರ್ದೇಶನಕ್ಕೆ ಧುಮುಕಿ ಸೇವೆ ಸಲ್ಲಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page