Friday, March 14, 2025

ಸತ್ಯ | ನ್ಯಾಯ |ಧರ್ಮ

ಮುಸ್ಲಿಂ ವ್ಯಾಪಾರಿಯನ್ನು ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಸಿಲುಕಿಸಲು VHP ನಾಯಕನಿಂದ ಸಂಚು!

ಮೀರತ್: ಮುಸ್ಲಿಂ ಸಮುದಾಯದ ಮಾಂಸದ ವ್ಯಾಪಾರಿಯೊಬ್ಬನನ್ನು ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಕ್ಕಾಗಿ ಉತ್ತರಪ್ರದೇಶ ಪೊಲೀಸರು ಸಹರಾನ್ಪುರದಲ್ಲಿ ವಿಶ್ವ ಹಿಂದೂ ಪರಿವಾರ ಎಂಬ ಬಲಪಂಥೀಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷನನ್ನು ಬಂಧಿಸಿದ್ದಾರೆ.

ವಿಶ್ ಸಿಂಗ್ ಕಾಂಬೋಜ್(36) ಬಂಧಿತ ಆರೋಪಿ. ಈತ ಟಿಪ್ಪು ಖುರೇಷಿ ಎಂಬ ಮಾಂಸದ ವ್ಯಾಪಾರಿಯಿಂದ 50,000ರೂ. ಸುಫಾರಿ ಪಡೆದು ಇನ್ನೊಬ್ಬ ಮುಸ್ಲಿಂ ವ್ಯಾಪಾರಿಯನ್ನು ಸಿಲುಕಿಸಲು ಸಂಚು ರೂಪಿಸಿದ್ದ ಎಂದು ಸರಸವಾ ಪೊಲೀಸ್ ಠಾಣಾ ಎಸ್ಎಚ್ಒ ನರೇಂದರ್ ಶರ್ಮಾ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಸಹರಾನ್ಪುರದ ಸರಸವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿಪ್ಪು ಖುರೇಷಿ ಮತ್ತೊಬ್ಬ ಇನ್ನೊಬ್ಬ ಖಾದರ್ ‌ (ಹೆಸರು ಬದಲಿಸಲಾಗಿದೆ) ಮಾಂಸದ ದಂಧೆ ಮಾಡುತ್ತಿದ್ದರು. ಖಾದರ ಬಹಳ ಒಳ್ಳೆಯ ಲಾಭ ಮಾಡುತ್ತಿದ್ದ. ಖುರೇಷಿಗೆ ವ್ಯಾಪಾರವೇ ಆಗುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಖುರೇಷಿ ಖಾದರ್‌ ವಿರುದ್ಧ ಏನಾದರೂ ಮಾಡಲು ಯೋಜನೆ ಹಾಕುತ್ತಿದ್ದ. ಆಸಂದರ್ಭದಲ್ಲಿ VHP ಮುಖಂಡ ವಿಶ್‌ ಸಿಂಗ್‌ ಜೊತೆಯಾಗಿದ್ದ. ಇಬ್ಬರು ಸೇರಿ ಖಾದರ್‌ ನನ್ನು ಗೋಹತ್ಯೆ ಆರೋಪದಲ್ಲಿ ಸಿಲುಕಿಲು ಯೋಜನೆ ರೂಪಿಸಿದ್ದರು.

ಮೊದಲೇ ಮಾಡಿಕೊಂಡ ಯೋಜನೆಯಂತೆ ವಿಶ್ ಸಿಂಗ್ ಕಾಂಬೋಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಹರಾನ್ಪುರದ ಪ್ರಮುಖ ಹೆದ್ದಾರಿಯೊಂದರಲ್ಲಿ ಸತ್ತ ಗೋವಿನ ಅವಶೇಷಗಳನ್ನು ಇರಿಸಿ ಗೋಹತ್ಯೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವನಿಂದ ಗೋವಿನ ಅವಶೇಷಗಳನ್ನು ಪಡೆದಿದ್ದರು. ತನಖೆಯಿಂ ಈ ಅವಶೇಷಗಳು ಬಹಳ ದಿನಗಳ ಹಿಂದಿನವು ಎಂಬುದು ತಿಳಿದು ಬಂದಿದ್ದರಿಂದ ʼವಿಶ್ವ ಹಿಂದೂ ಪರಿವಾರʼ ಸಂಸ್ಥಾಪಕ ಕಾಂಬೋಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಖುರೇಷಿಯ ಸೂಚನೆಯ ಮೇರೆಗೆ ಗೋವಿನ ಅಸ್ಥಿಪಂಜರವನ್ನು ರಸ್ತೆಯಲ್ಲಿರಿಸಿ ಪ್ರತಿಭಟನೆ ನಡೆಸಿರುವುದಾಗಿ ಆತ ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.

ಖುರೇಷಿ ತನ್ನ ಪ್ರತಿಸ್ಪರ್ಧಿ ವ್ಯಾಪಾರಿಯನ್ನು ಜೈಲಿಗೆ ಕಳುಹಿಸಿ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿದನು. ವಿಶ್ ಸಿಂಗ್ ಬಂಧನದ ಬಳಿಕ ಖುರೇಷಿ ಪರಾರಿಯಾಗಿದ್ದಾನೆ. ಆತನ ಬಂಧನದ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.

ಸಹರಾನ್ಪುರ ಎಸ್ಎಸ್ಪಿ ರೋಹಿತ್ ಸಿಂಗ್ ಸಜ್ವಾನ್ ಈ ಕುರಿತು ಪ್ರತಿಕ್ರಿಯಿಸಿ, ಕಾಂಬೋಜ್ ವಿರುದ್ಧ ಗಲಭೆ ಸೇರಿದಂತೆ ಏಳು ಪ್ರಕರಣಗಳು ಈ ಮೊದಲು ದಾಖಲಾಗಿದೆ. ಇದೀಗ ಶಾಂತಿ ಭಂಗ ಮತ್ತು ಸುಳ್ಳು ಮಾಹಿತಿ ಒದಗಿಸಿದ್ದಕ್ಕಾಗಿ ಬಿಎನ್ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page