Monday, July 28, 2025

ಸತ್ಯ | ನ್ಯಾಯ |ಧರ್ಮ

‘ವೀಡಿಯೋಗಳು 4-5 ವರ್ಷ ಹಳೆಯವು’: ಪುತ್ರ ಪ್ರಜ್ವಲ್ ರೇವಣ್ಣ ವಿವಾದ ಕುರಿತು ತಂದೆ ರೇವಣ್ಣ ಹೇಳಿಕೆ

ಕರ್ನಾಟಕದ ಶಾಸಕ ಮತ್ತು ಜನತಾದಳ (ಜಾತ್ಯತೀತ) ನಾಯಕ ಎಚ್‌ಡಿ ರೇವಣ್ಣ ಅವರು ತಮ್ಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಕುರಿತು ಪ್ರತಿಕ್ರಿಯಿಸಿ, ಇದೊಂದು “ಪಿತೂರಿ” ಎಂದು ಹೇಳಿದ್ದಾರೆ ಮತ್ತು ವೀಡಿಯೊಗಳು “4-5 ವರ್ಷಗಳಷ್ಟು ಹಳೆಯವು” ಎಂದು ಹೇಳಿದ್ದಾರೆ.

ಕಳೆದ ವಾರ ಪ್ರಜ್ವಲ್ ರೇವಣ್ಣ ಅವರ ‘ಅಶ್ಲೀಲ ವಿಡಿಯೋಗಳು’ ಹೊರಬಿದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಭಾನುವಾರ ಪ್ರಜ್ವಲ್ ಮತ್ತು ಆತನ ತಂದೆಯ ವಿರುದ್ಧ ಅವರ ಮನೆಯವರು ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು.

ಎಂತಹ ಷಡ್ಯಂತ್ರ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ, ಹೆದರಿ ಓಡಿ ಹೋಗುವವನಲ್ಲ, 4-5 ವರ್ಷ ಹಿಂದಿನದನ್ನು ಈಗ ಬಿಡುಗಡೆ ಮಾಡಿದ್ದಾರೆ ಎಂದು ಎಚ್.ಡಿ.ರೇವಣ್ಣ ಹೇಳಿದರು.

ವಿಡಿಯೋ ಹಳೆಯದಾದರೂ ಪ್ರಕರಣ ನಡೆದಿರುವುದು ನಿಜವಾಗಿರುವುದರಿಂದ ಆರೋಪಿಗೆ ಶಿಕ್ಷೆ ಆಗಲೇಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದು, ಈ ಕುರಿತು ಹೋರಾಟಗಳು ನಡೆಯುತ್ತಿವೆ.

ಈ ನಡುವೆ ಜೆಡಿಎಸ್‌ ಪಕ್ಷದಿಂದ ಪ್ರಜ್ವಲನನ್ನು ಉಚ್ಛಾಟಿಸಿರುವುದಾಗಿಯೂ ಸುದ್ದಿ ಬರುತ್ತಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಆರೋಪಿ ಪ್ರಜ್ವಲ್‌ ಜರ್ಮನಿಗೆ ಹೋಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page