Friday, June 14, 2024

ಸತ್ಯ | ನ್ಯಾಯ |ಧರ್ಮ

ವಿದೇಶದಲ್ಲಿ ಭಾರತ ಮೂಲದ ನಾಲ್ವರ ಅಪಹರಣ: ತೋಟದಲ್ಲಿ ಪತ್ತೆಯಾದ ಮೃತದೇಹಗಳು

ಕ್ಯಾಲಿಫೋರ್ನಿಯಾ : ಭಾರತದ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅಮೆರಿಕದ ಕ್ಯಾಲಿಫೋರ್ನಿಯಾದ ಮರ್ಸಿಡ್‌ ನಗರದಲ್ಲಿ ಕಿಡ್ನಾಪ್‌ ಆಗಿದ್ದು, ಇದೀಗ  ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾ ಸ್ಯಾನ್‌ಜೋಕ್ವಿನ್‌ ವ್ಯಾಲಿಯಲ್ಲಿರುವ ಮರ್ಸಿಡ್‌ನಲ್ಲಿ ಸೋಮವಾರದಂದು ಭಾರತ ಮೂಲದ ಒಂದೇ ಕುಟುಂಬದ ನಾಲ್ವರನ್ನು ಅಪಹರಿಸಲಾಗಿತ್ತು. 8 ತಿಂಗಳ ಮಗು ಅರೂಹಿ ಧೇರಿ ಸೇರಿದಂತೆ ಮಗುವಿನ ಪೋಷಕರು ಮತ್ತು ಸೋದರ ಮಾವನನ್ನು ಅವರ ಉದ್ಯಮದ ಸ್ಥಳದಿಂದ ಕಿಡ್ನಾಪ್‌ ಮಾಡಿದ್ದು, ಮರ್ಸಿಡ್‌ ಕೌಂಟಿಯ ತೋಟದಲ್ಲಿ 4 ಜನರ ಮೃತ ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಿಡ್ನಾಪ್‌ ಮಾಡಿದ್ದ ವ್ಯಕ್ತಿಯ ಕಣ್ಗಾಗಳು ವೀಡಿಯೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದು, ಹಣಕಾಸಿನ ವ್ಯವಹಾರಕ್ಕೆ ಈ ಕೊಲೆ ಮಾಡಿರಬಹದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

8 ತಿಂಗಳ ಮಗು ಅರೂಹಿ ಧೇರಿ, ಮಗುವಿನ ತಂದೆ ಜಶದೀಪ್‌ ಸಿಂಗ್‌(36) ತಾಯಿ ಜಸ್ಲೀನ್‌ ಕೌರ್‌(27) ಮತ್ತು ಸೋದರಮಾವ ಅಮನ್‌ ದೀಪ್‌ ಸಿಂಗ್‌(39) ನಾಲ್ಕೂ ಜನ ಕೊಲೆಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು

Related Articles

ಇತ್ತೀಚಿನ ಸುದ್ದಿಗಳು