Monday, July 28, 2025

ಸತ್ಯ | ನ್ಯಾಯ |ಧರ್ಮ

ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಭೀಕರ ಹಲ್ಲೆ : ಮಗನನ್ನು ನೋಡಲು ಪೋಷಕರಿಗೆ ಸಿಗುತ್ತಿಲ್ಲ ವೀಸಾ

ದೆಹಲಿ : ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಶುಭಂ ಗಾರ್ಗ್‌(28) ಮೇಲೆ ಭೀಕರ ಹಲ್ಲೆ ನಡೆದಿದ್ದು, ಘಟನೆ ನಡೆದು ಒಂದು ವಾರವಾದರೂ ಪೋಷಕರಿಗೆ ವಿದೇಶಕ್ಕೆ ತೆರಳಲು ವೀಸಾ ಸಿಗುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ನ್ಯೂ ಸೌತ್‌ ವೇಲ್ಸ್‌ ವಿಶ್ವವಿದ್ಯಾಲಯದಲ್ಲಿ ಮೆಕಾನಿಕಲ್‌ ಇಂಜಿನಿಯರಿಂಗ್‌ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಶುಭಂ ಗಾರ್ಗ್‌(28) ಮೇಲೆ ಭೀಕರ ಹಲ್ಲೆ ನಡೆದಿದೆ. ಅಕ್ಟೋಬರ್‌ 6ರಂದು ಸುಮಾರು 11 ಬಾರಿ ಚಾಕುವಿನಿಂದ ಚುಚ್ಚಿ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಗಳು ಅತ್ಯಂತ ಕ್ರೂರವಾಗಿ ದಾಳಿ ಮಾಡಿದ್ದಾರೆ. ಪ್ರಸ್ತುತ ಹಲ್ಲೆಗೊಳಗಾಗಿರುವ ಶುಭಂ ಗಾರ್ಗ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಭಂ ಅವರ ಮುಖ, ಎದೆ ಮತ್ತು ಹೊಟ್ಟೆಯ ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ.

ಅಗ್ರಾ ಮೂಲದ ಭಾರತೀಯ ಅಂತಾರಾಷ್ಟ್ರೀಯ ವಿದ್ಯಾರ್ಥಿ ಶುಭಂ ಗಾರ್ಗ್‌ ಹಲ್ಲೆಗೊಳಗಾದ ನಂತರ ಪ್ರಥಮವಾಗಿ ಪಕ್ಕದ ಮನೆಯವರ ಸಹಾಯ ಪಡೆದು ರಾಯಲ್‌ ನಾರ್ತ್‌ ಶೋರ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ

ಶುಭಂ ಗಾರ್ಗ್‌ ಅವರು ಐಐಟಿ ಮದ್ರಾಸಿನಿಂದ ತಮ್ಮ ಬ್ಯಾಚುಲರ್‌ ಆಫ್‌ ಟೆಕ್ನಾಲಜಿ ಮತ್ತು ಮಾಸ್ಟರ್‌ ಆಫ್‌ ಸೈನ್ಸ್‌ ಪದವಿ ಮುಗಿಸಿದ್ದರು. ತಮ್ಮ ಮುಂದಿನ ಶಿಕ್ಷಣಕ್ಕೆಂದು ಸೆಪ್ಟಂಬರ್‌ 1ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ʼದಾಳಿಕೋರನ ಬಗ್ಗೆ ಶುಭಂಗಾಗಲಿ ಅವರ ಸ್ನೇಹಿತರಿಗಾಗಲೀ ಪರಿಚಯವಿಲ್ಲ.ಇದೊಂದು ಜನಾಂಗೀಯ ದಾಳಿಯಂತೆ ತೋರುತ್ತಿದೆ.  ಕಳೆದ ಏಳು ದಿನಗಳಿಂದ ಆಸ್ಟೇಲಿಯಾಕ್ಕೆ ಹೋಗವುದಕ್ಕೆ ವೀಸಾ ಪಡೆಯಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲಈ ಕಾರಣ ಆಸ್ಟ್ರೇಲಿಯಾಗೆ ಹೋಗರು ಸರ್ಕಾರ ಸಹಾಯ ಮಾಡಬೇಕು ʼ ಎಂದು ಶುಭಂ ಅವರ ತಂದೆ ರಾಮನಿವಾಸ್‌ ಗಾರ್ಗ್‌ ಕೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ 27 ವರ್ಷದ ಶಂಕಿತನನ್ನು ಈಗಾಗಲೇ ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ʼವೀಸಾ ಕುರಿತು MEA ಯೊಂದಿಗೆ ಸಿಡ್ನಿಯಲ್ಲಿರುವ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ವೀಸಾ ಅರ್ಜಿ ಪ್ರಕ್ರಿಯೆಯಲ್ಲಿದ್ದು, ಆದಷ್ಟು ಬೇಗ ಸಂತ್ರಸ್ಥ ಕುಟುಂಬಕ್ಕೆ ವೀಸಾ ಸಿಗಲಿದೆʼ ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನವನೀತ್‌ ಚಾಹಲ್‌ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page