Monday, June 17, 2024

ಸತ್ಯ | ನ್ಯಾಯ |ಧರ್ಮ

ವಿಧಾನಸೌಧದಲ್ಲಿ ಬಾಂಬ್‌ ಬೆದರಿಕೆ : ಆರೋಪಿ ಬಂಧನ

ಬೆಂಗಳೂರು : ಶುಕ್ರವಾರದಂದು ವಿಧಾನಸೌಧದಲ್ಲಿ ಬಾಂಬ್‌ ಇಟ್ಟಿರುವುದಾಗಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಬೆದರಿಕೆಯ ಕರೆ ಮಾಡಿರುವ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ʼನೀವೆಲ್ಲಾ ಇರುವ ಕಟ್ಟಡದಲ್ಲಿ ಬಾಂಬ್‌ ಅಳವಡಿಸಲಾಗಿದೆ ಸ್ಪಲ್ಪದರಲ್ಲೇ ಬಾಂಬ್‌ ಸ್ಪೋಟಗೊಳ್ಳಲಿದೆʼ ಎಂದು ವಿಧಾನಸೌಧದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಶುಕ್ರವಾರದಂದು ಕಿಡಿಗೇಡಿಗಳು ಬೆದರಿಕೆ ಕರೆಯನ್ನು ಮಾಡಿದ್ದರು. ವಿಷಯ ಕೇಳಿ ಗಾಬರಿಗೊಂಡ ಕಚೇರಿ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಇದೊಂದು ಸುಳ್ಳು ಕರೆ ಎಂದು ತಿಳಿದು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಕೇಂದ್ರ ವಿಭಾಗದ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ತದನಂತರ ಹೆಬ್ಗೋಡಿ ನಿವಾಸಿಯಾದ 41 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ಯೊಬ್ಬರು ಈ ಬೆದರಿಕೆ ಕರೆಯನ್ನು ಮಾಡಿದ್ದರು ಎಂದು ತಿಳಿದು ಬಂದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ ಗೌಡ  ಮಾಹಿತಿ ನೀಡಿದ್ದಾರೆ.

ಇಂದು ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದು, ಬೆದರಿಕೆ ಕರೆ ಮಾಡಿರುವ ಹಿಂದಿನ ಉದ್ದೇಶದ ಬಗ್ಗೆ  ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ : ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪಂಜುರ್ಲಿ ದೈವದ ಇತಿಹಾಸ ನಿಮಗೆ ಗೊತ್ತೇ? ಪಂಜುರ್ಲಿ ದೈವದ ನಿಜವಾದ ಕಥೆ ಏನು? ಇಲ್ಲಿದೆ ನೋಡಿ COMPLETE DETAILS

Related Articles

ಇತ್ತೀಚಿನ ಸುದ್ದಿಗಳು