ಕಲ್ಬುರ್ಗಿ : ಜನರನ್ನು ತುಂಬಿ ಬಂದ ಬಸ್ ಹತ್ತಲು ಹೋಗಿ ವಿದ್ಯಾರ್ಥಿನಿ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ಪೆಟ್ಟು ಬಿದ್ದಿದ್ದು, ಬಸ್ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ವಾಡಿ ಗ್ರಾಮದಲ್ಲಿ ನಡೆದಿದೆ.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹೋಗುವ ಆತುರದಲ್ಲಿ ಜನ ತುಂಬಿ ಬಸ್‌ಗಳನ್ನೇ ಹತ್ತಿಕೊಳ್ಳುವ ಅನಿವಾರ್ಯತೆಯಿಂದ ಹತ್ತಲು ಪ್ರಯತ್ನಿಸುತ್ತಾರೆ. ಬಸ್ ಚಾಲಕರು ಅದನ್ನು ಅರ್ಥ ಮಾಡಿಕೊಳ್ಳದೆ ಬಸ್ ಅನ್ನು ಚಾಲನೆ ಮಾಡಿ ಅವಘಡ ಅಗುವಂತೆ ಮಾಡುತ್ತಾರೆ.
ಇದೇ ರೀತಿ ಘಟನೆ ಇಂದು ಕಲ್ಬುರ್ಗಿಯಲ್ಲಿ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ವಾಡಿ ಗ್ರಾಮದಲ್ಲಿ ಸರ್ಕಾರದ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಆತುರದಲ್ಲಿ ವಿದ್ಯಾರ್ಥಿನಿ ಬಸ್ ಹತ್ತಿ ಕಾಲು ಜಾರಿ ನೆಲಕ್ಕೆ ಉರುಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯ ತಲೆಗೆ ಪೆಟ್ಟು ಬಿದ್ದಿದ್ದು, ಸಾರ್ವಜನಿಕರರು ಆಕ್ರೋಶಗೊಂಡಿದ್ದಾರೆ. ನಂತರ ಸಾರ್ವಜನಿಕರು ಚಲಿಸುವ ಬಸ್ ಅನ್ನು ತಡೆ ಹಿಡಿದು ಬಸ್ ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.