Tuesday, January 27, 2026

ಸತ್ಯ | ನ್ಯಾಯ |ಧರ್ಮ

ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡೀಯೋ ವೈರಲ್‌: ಆರೋಪಿಯ ಬಂಧನ

ಪಂಜಾಬ್‌ : ಛಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಆಕ್ಷೇಪಾರ್ಹ ವೀಡಿಯೋ ವೈರಲ್‌ ಆಗಿದ್ದು ವೀಡಿಯೋ ಚಿತ್ರೀಕರಿಸಿದವನ್ನು ಬಂಧಿಸಬೇಕೆಂದು ನೆನ್ನೆ ರಾತ್ರಿ ಅಲ್ಲಿನ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿಯನ್ನು ನಡೆಸಿದ್ದು, ಅಲ್ಲಿನ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯೊಬ್ಬಳು ವಿಶ್ವವಿದ್ಯಾಲಯದಲ್ಲಿದ್ದ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಿ ಆಕ್ಷೇಪಾರ್ಹ ವೀಡಿಯೋ ಒಂದನ್ನು ಸೆರೆ ಹಿಡಿದು ಬಿಡುಗಡೆ ಮಾಡಿದ್ದಾಳೆ. ಈ ಕಾರಣ ತಪ್ಪಿತಸ್ತೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಲೀಸರಿಗೆ ತಿಳಿಸಿ ವಿವಿ ವಿದ್ಯಾರ್ಥಿಗಳೆಲ್ಲಾ ಒಟ್ಟಾಗಿ ಸೇರಿ ನಿರಂತರ ಅಹೋರಾತ್ರಿ ಧರಣಿಯನ್ನು ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆಯ ಕುರಿತು ಮಾತನಾಡಿದ ಮೊಹಾಲಿಯ ಎಸ್‌ಎಸ್‌ಪಿ ವಿವೇಕ್ ಸೋನಿ ʼಪಂಜಾಬ್‌ನ ಛಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಆಕ್ಷೇಪಾರ್ಹ ವೀಡಿಯೋ ವೈರಲ್‌ ಆಗಿದ್ದು ವಿದ್ಯಾರ್ಥಿನಿಯೊಬ್ಬಳು ವೀಡಿಯೊವನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾವು ಸಂಭವಿಸಿಲ್ಲ. ವೈದ್ಯಕೀಯ ದಾಖಲೆಗಳ ಪ್ರಕಾರ, ಯಾವುದೇ ಆತ್ಮಹತ್ಯೆಯ ಪ್ರಯತ್ನ ನಡೆದಿಲ್ಲ,ʼ ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page