Tuesday, July 1, 2025

ಸತ್ಯ | ನ್ಯಾಯ |ಧರ್ಮ

ವಿಜಯ್ ಸೇತುಪತಿ ನಟನೆಯ ‘ಏಸ್’ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ರಿಲೀಸ್

ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ, ರುಕ್ಮಿಣಿ ವಸಂತ್ ನಟನೆಯ ‘ಏಸ್’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಬಿಡುಗಡೆಯಾಗಿದೆ. . ಜೂಜು, ಬಂದೂಕು, ಸ್ಫೋಟ, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶಗಳನ್ನು ಒಳಗೊಂಡಿರುವ ಅನಿಮೇಟೆಡ್ ಸ್ವರೂಪದಲ್ಲಿ ಟೀಸರ್ ಅನಾವರಣಗೊಳ್ಳಿಸಲಾಗಿದೆ. ವಿಜಯ್ ಸೇತುಪತಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಸಾಥ್ ಕೊಟ್ಟಿದ್ದಾರೆ.

ಏಸ್ ಸಿನಿಮಾದಲ್ಲಿ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಪಿ.ಎಸ್.ಅವಿನಾಶ್, ದಿವ್ಯಾ ಪಿಳ್ಳೈ, ಬಬ್ಲು, ರಾಜಕುಮಾರ್ ಮತ್ತು ಅನೇಕ ಪ್ರಮುಖ ನಟರು ತಾರಾಬಳಗದಲ್ಲಿದ್ದಾರೆ. ಆರ್ಮುಗ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಬಹದ್ದೂರ್ ರಾವತ್ ಛಾಯಾಗ್ರಹಣ ಮತ್ತು ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದು, ಗೋವಿಂದರಾಜ್ ಸಂಕಲನ ಒದಗಿಸಿದ್ದಾರೆ.

ಕ್ರೈಮ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಏಸ್ ಸಿನಿಮಾವನ್ನು, 7Cs ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ ಈ ವರ್ಷವೇ ರಿಲೀಸ್ ಆಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page