Monday, July 28, 2025

ಸತ್ಯ | ನ್ಯಾಯ |ಧರ್ಮ

ವಿಕ್ರಾಂತ್‌ರೋಣನ ಅದ್ಭುತ ಲೋಕ 27ರಂದು 27 ದೇಶಗಳಲ್ಲಿ ಚಿತ್ರದ ಪ್ರಿವ್ಯೂ

 ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ.  ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ ಈಗ ‘ಸಿನೆಡಬ್ಸ್’  ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತಮ್ಮಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿದೆ.

ನಿನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಜಾಕ್‌ಮಂಜು, ಈ ಆಫ್ ಅನ್ನು ಹೊರತಂದಿರುವ ಆದಿತ್ಯಕಶ್ಯಪ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆದಿತ್ಯ ಕಶ್ಯಪ್ ಮಾತನಾಡುತ್ತ ಪ್ಲೇಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಂಡು ತೆರೆಮೇಲೆ ಯಾವುದೇ ಭಾಷೆ ಪ್ರದರ್ಶನವಾಗುತ್ತಿರಲಿ, ನಾವು ಮೊಬೈಲ್ ನಲ್ಲಿ ನಮ್ಮಿಷ್ಟದ ಭಾಷೆ ಆಯ್ಕೆ ಮಾಡಿಕೊಂಡು ಹೆಡ್ ಫೋನ್ ಮೂಲಕ ಕೇಳುತ್ತ ಚಿತ್ರವನ್ನು ಎಂಜಾಯ್ ಮಾಡಬಹುದು. ಕಳೆದವಾರ ರಿಲೀಸಾದ ತಮಿಳಿನ ರಾಕೆಟ್ರಿ ಚಿತ್ರದ ಜೊತೆ ನಾವು ಟೈಅಪ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದಲ್ಲದೆ ಓಟಿಟಿಯಲ್ಲಿ ಬರುವ ಚಿತ್ರಗಳನ್ನೂ ನಮ್ಮ ಭಾಷೆಯಲ್ಲೇ ವೀಕ್ಷಿಸಬಹುದಾಗಿದೆ. ಚಿತ್ರದ ನಿರ್ಮಾಪಕರು ಆಪ್‌ನೊಂದಿಗೆ ಮೊದಲೇ ಟೈಅಪ್ ಮಾಡಿಕೊಂಡಿದ್ದರೆ ಮಾತ್ರವೇ ಅದು ಸಾಧ್ಯವಾಗಲಿದೆ ಎಂದು ವಿವರಿಸಿದರು.  

ನಂತರ ನಿರ್ಮಾಪಕ ಜಾಕ್ ಮಂಜು ಮಾತನಾಡುತ್ತ ಇವರು ಒಂದೆರಡು ತಿಂಗಳ ಹಿಂದೆಯೇ ನನ್ನಬಳಿ ಬಂದಿದ್ದರೆ ಬೆಂಗಾಳಿ, ಮರಾಠಿ, ಗುಜರಾತಿ ಭಾಷೆಯಲ್ಲೂ ನಮ್ಮ ಚಿತ್ರವನ್ನು ಡಬ್ ಮಾಡಬಹುದಿತ್ತು. ನಾವು ಡಬ್ ಮಾಡಿದ ಅಷ್ಟೂ ಭಾಷೆಯ ಸೌಂಡ್‌ಟ್ರ‍್ಯಾಕನ್ನು ಇವರಿಗೆ ಕೊಟ್ಟಾಗ ಅವರು ಅದನ್ನು ತಮ್ಮ ಆಪ್‌ಗೆ ಅಳವಡಿಸುತ್ತಾರೆ. ಕೆಲ ಕೇಂದ್ರಗಳಲ್ಲಿ ಎಲ್ಲಾ ಭಾಷೆಯಲ್ಲಿ ರಿಲೀಸ್ ‌ಮಾಡಲು ಸಾಧ್ಯವಾಗದಿದ್ದಾಗ ಆ ಭಾಷೆಯ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದರು. 27ರಂದು ಪ್ರಪಂಚದ 27 ದೇಶಗಳಲ್ಲಿ ವಿಕ್ರಾಂತ್ ರೋಣ ಪ್ರಿವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಗಿದೆ. ಅಲ್ಲದೆ ಪಾಕಿಸ್ತಾನದಲ್ಲೂ ವಿಕ್ರಾಂತ್‌ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ರಿಲೀಸಾಗುತ್ತಿರುವ ವಿಕ್ರಾಂತ್ ರೋಣ, ಕರ್ನಾಟಕದಲ್ಲೇ 400ರಿಂದ 420 ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ

ಸಿಗುತ್ತಿದೆ. ಇದರ ಜೊತೆಗೆ, ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್, ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಶೇಕಡಾ.90 ರಷ್ಟು 3ಡಿ ವರ್ಷನ್ ಚಿತ್ರ ರಿಲೀಸಾಗುತ್ತಿದ್ದು, 3ಡಿ ಇಲ್ಲದ ಕಡೆ ಮಾತ್ರವೇ 2ಡಿ ವರ್ಷನ್ ಪ್ರದರ್ಶನವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page