ಸಕಲೇಶಪುರ : ಗ್ರಾಮಸ್ಥರು ಯುವಕರು ಆ ಜಾಗದಲ್ಲಿ ಕ್ರೀಡಾ ಕೂಟಗಳನ್ನು ನಡೆಸಿ ಹಬ್ಬ ಹರಿದಿನಗಳನ್ನು ಮಾಡುತ್ತಿದ್ದರು. ಆದರೆ ಈಗ ಪ್ರಾಭಾವಿ ಎನಿಸಿಕೊಂಡಿರುವ ಇವರು ಜಾಗಕ್ಕೆ ಬೇಲಿಹಾಕಿಸಿಕೊಂಡು ದೌರ್ಜನ್ಯ ಮಾಡುತ್ತಿರುವುದರಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲು ಹಚ್ಚ ಹಸಿರುನಿಂದಲೆ ಕೂಡಿದೆ, ಹಾಗೆಯೆ ಪಶ್ಚಿಮ ಘಟ್ಟಗಳು ಕೂಡ ಇಂದು ಮಾನವನ ಅತಿಯಾಸೆಗೆ ನಾಶದ ಹಾದಿಯನ್ನು ಹಿಡಿಯುತ್ತಿದೆ. ಒಂದೆಡೆ ಕಾಡಾನೆ ಸಮಸ್ಯೆಯಿಂದ ಜನರು ಬಳಲುತ್ತಿದ್ದರೆ ಇನ್ನೊಂದೆಡೆ ಕಾಡುನಾಶ ಭೂ ಕಬಳಿಕೆಗೆ ತಾಲ್ಲೂಕು ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ ಸಕಲೇಶಪುರ ತಾಲೂಕಿನ ಬಾಳಪೇಟೆ ಹೋಬಳಿಯ ಜಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಸಿ ತಂತಿ ಬೇಲಿ ಹಾಕಿ ಕಾಫಿ, ಸಿಲ್ವರ್ ಗಿಡಗಳನ್ನು ರಾಜಾರೋಷವಾಗಿ ಬೆಳೆದು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ದೂರಿದರು. ಜಮ್ಮನಹಳ್ಳಿಯ ಗಾಳಿಗುಡ್ಡ ಗ್ರಾಮದ ಸರ್ವೆ ನಂ 33 ರಲ್ಲಿ 64 ಎಕರೆ ಗೋಮಾಳ ಜಾಗದಲ್ಲಿ 4 ಎಕರೆ 30 ಗುಂಟೆ ಜಾಗವನ್ನು 2019 ರಿಂದಲೂ ಅಕ್ರಮ ಬೇಲಿಹಾಕಿಕೊಂಡು ಕಾಫಿ, ಸಿಲ್ವರ್ ಮರಗಳನ್ನು ನೆಟ್ಟು ನಮ್ಮದೆ ಭೂಮಿ ಎಂದು ಸುಳ್ಳು ದಾಖೆಲೆಗಳನ್ನು ಇಟ್ಟುಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ಶಣ್ಮುಗಯ್ಯ (ರಾಜು ರೈಟರ್) ಎಂಬ ಬಾಳುಪೇಟೆಯ ವ್ಯಕ್ತಿ ಭೂ ಕಬಳಿಕೆ ಮಾಡಿರುವ ವ್ಯಕ್ತಿಯಾಗಿದ್ದಾರೆ. ಈಗಾಗಲೆ ತಹಸಿಲ್ದಾರರು ಮತ್ತು ಗ್ರಾಮ ಲೆಕ್ಕಿಗ ಪಂಚಾಯ್ತಿ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಕೂಡ ಯಾವುದೆ ಪ್ರಯೋಜವಾಗಿರುವುದಿಲ್ಲ. ಮೊದಲು ಗ್ರಾಮಸ್ಥರು ಯುವಕರು ಆ ಜಾಗದಲ್ಲಿ ಕ್ರೀಡಾ ಕೂಟಗಳನ್ನು ನಡೆಸಿ ಹಬ್ಬ ಹರಿದಿನಗಳನ್ನು ಮಾಡುತ್ತಿದ್ದರು ಆದರೆ ಈಗ ಪ್ರಾಭಾವಿ ಎನಿಸಿಕೊಂಡಿರುವ ಇವರು ಜಾಗಕ್ಕೆ ಬೇಲಿಹಾಕಿಸಿಕೊಂಡು ದೌರ್ಜನ್ಯ ಮಾಡುತ್ತಿರುವುದರಿಂದ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದರು.
ಈ ಜಾಗದಲ್ಲಿ ವಸತಿಶಾಲೆ ಕಟ್ಟಿಸಿಕೊಡಿ ಗ್ರಾಮಸ್ಥರ ಆಗ್ರಹ: ಜಮ್ಮನಹಳ್ಳಿಯ ಗಾಳಿಗುಡ್ಡ ಗ್ರಾಮದ ಸರ್ವೆ ನಂ 33 ರಲ್ಲಿ 64 ಎಕರೆ ಗೋಮಾಳ ಜಾಗದಲ್ಲಿ 4 ಎಕರೆ 30 ಗುಂಟೆಯ ಜಾಗದಲ್ಲಿ ಗ್ರಾಮಸ್ಥರ ಆಗ್ರಹವೇನೆಂದರೆ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಹಳಿಂದ ಕೂಡಿದೆ ನಮ್ಮ ಮಕ್ಕಳು ಓದಬೇಕಾದರೆ ಬಾಳುಪೇಟೆ, ಸಕಲೇಶಪುರ, ಹಾಸನ ಕ್ಕೆ ಹೋಗಬೇಕಿದೆ ಹಾಗಾಗಿ ನಮ್ಮ ಊರಿನಲ್ಲಿ ಈ ಜಾಗದಲ್ಲಿ ವಸತಿ ಸಹಿತ ಶಾಲೆಯಾದರೆ ನಮಗೆಲ್ಲಿರಗೂ ಅನುಕೂಲವಾಗುತ್ತದೆ ಎಂದು ಆಗ್ರಹಿಸುತ್ತಿದ್ದಾರೆ. ಮುರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ, ಅಬ್ದುಲ್ ಕಲಾಂ ಇಂತಯಹ ಶಾಲೆಗಳನ್ನು ಸರ್ಕಾರ ನಮಗೆ ಮಂಜೂರು ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಒತ್ತುವರಿ ಭೂಮಿ ಖಾಲಿ ಮಾಡದಿದ್ದರೆ ಉಗ್ರ ಹೋರಾಟ: ಒತ್ತುವರಿ ಜಾಗವನ್ನು ಸರ್ಕಾರ ಖಾಲಿ ಮಾಡಿಸದಿದ್ದರೆ ಅಥವಾ ಈ ಪ್ರಕರಣವನ್ನು ಗಂಭೀರಾಗಿ ತೆಗೆದುಕೊಳ್ಳದಿದ್ದರೆ ನಾವು ಇದೆ ಜಾಗದಲ್ಲಿ ಟೆಂಟುಗಳನ್ನು ಹಾಕಿಕೊಂಡು ಮಕ್ಕಳಿಒಗೆ ಪಾಠ ಮಾಡುತ್ತೇವೆ ಅದಕ್ಕೆ ಪೂರ್ವ ತಯಾರಿ ಮಾಡಿದ್ದೇವೆ ಮತ್ತು ಸರ್ಕಾರ ಖಾಲಿ ಮಾಡಿಸದಿದ್ದರೆ ನಾವೆ ತಂತಿ ಬೇಕಿ ಕಿತ್ತುಹಾಕಿ ಅನಿರ್ಧಿಷ್ಟಾವದಿ ಹೋರಾಟವನ್ನು ಮಾಡುತ್ತೇವೆ ಎಂದುಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರು. ಈ ಹೋರಾಟದಲ್ಲಿ ಅಕ್ಕಪಕ್ಕದ ಗ್ರಾಮಗಳ ಯುವಕರಾದ ಯುವರಾಜು, ಮಧು, ಚಂದ್ರಶೇಖರ್, ಸುಧಾಕರ್, ಸಂತೋಷ್, ಪಂಚಯ್ತಿ ಸದಸ್ಯರಾದ ರವಿಕುಮಾರ್, ಚಂದನ್, ಕಿರಣ್, ಕಿರಣ್ ಗೌಡ, ಎಂ.ಡಿ. ಕಾಂತರಾಜು ಇನ್ನಿತರು ಉಪಸ್ಥಿತರಿದ್ದರು.