Monday, February 24, 2025

ಸತ್ಯ | ನ್ಯಾಯ |ಧರ್ಮ

ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ, ವಾಯುನೆಲೆ ಮೇಲೆ ಗುಂಡಿನ ದಾಳಿ

ನವದೆಹಲಿ : ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಸ್ಫೋಟಗೊಂಡಿದ್ದು, ವಾಯುನೆಲೆ ಮೇಲೆ ದುರ್ಷಕರ್ಮಿಗಳಿಂದ ಗುಂಡಿನ ದಾಳೆ ನಡೆಸಲಾಗಿದೆ.ಕೋಕ್ಸ್​​​​​ ಬಜಾರ್​ ವಾಯುನೆಲೆಯಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳ ವಿರುದ್ಧ ಬಾಂಗ್ಲಾ ಸೇನೆ ಪ್ರತಿದಾಳಿ ಮುಂದುವರಿಸಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ವಾಯುಪಡೆಯ ನೆಲೆ ಪಕ್ಕದಲ್ಲಿರುವ ಸಮಿಟಿ ಪ್ಯಾರಾದಲ್ಲಿ ಬಂಧಿಯಾಗಿರುವ ಕೆಲ ಅಪರಾಧಿಗಳೇ ಈ ದಾಳಿ ನಡೆಸಿದೆ ಎಂದು ಬಾಂಗ್ಲಾದೇಶ ಸಶಸ್ತ್ರ ಪಡೆಗಳ ಸಾರ್ವಜನಿಕ ಸಂಪರ್ಕ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಸದ್ಯಕ್ಕೆ ಹೇಳಿಕೆ ಬಿಡುಗಡೆ ಮಾಡಿದೆ.

ಕಳೆದ ವರ್ಷ ಮೀಸಲಾತಿ ವಿಚಾರದಲ್ಲಿ ಇಡೀ ಬಾಂಗ್ಲಾ ದೇಶವೇ ಹೊತ್ತಿ ಉರಿದಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡುವಂತಾಯ್ತು. ಇದೀಗ ಮತ್ತೇ ಅದೇ ಮಾದರಿಯ ದಂಗೆ ಬಾಂಗ್ಲಾದಲ್ಲಿ ಮತ್ತೆ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಾಂಗ್ಲಾ ಸೇನೆಯು ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಡುತ್ತಿದೆ ಎಂದೂ ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page