ನವದೆಹಲಿ: ಭಾರತವನ್ನು ವಿಶ್ವದ ಡ್ರೋನ್ ಹಬ್ ಮಾಡುವ ಪ್ರಧಾನಿ ಮೋದಿಯವರ ದೃಷ್ಟಿಯ ಮಾರ್ಗದರ್ಶನದಲ್ಲಿ ಡ್ರೋನ್ ಸೇವೆಗಳನ್ನು ಪ್ರಾರಂಭಿಸಲಾಗಿದೆ.
ಅರುಣಾಚಲ ಪ್ರದೇಶ ಸರ್ಕಾರವು ವಿಶ್ವ ಆರ್ಥಿಕ ವೇದಿಕೆಯ ಸಹಯೋಗದಲ್ಲಿ ಆರೋಗ್ಯ, ಕೃಷಿ, ವಿಪತ್ತು ನಿರ್ವಹಣೆಯಲ್ಲಿ ಡ್ರೋನ್‌ಗಳನ್ನು ಬಳಸುವ ಪ್ರಾಯೋಗಿಕ ಯೋಜನೆಯನ್ನು ನಡೆಸಿದೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಡ್ರೋನ್ ಸೇವೆಯ ಮೊದಲ ಹಾರಾಟ ಯಶಸ್ವಿಯಾಗಿ ಉಡಾವಣೆ ಯಾಗಿದ್ದು, ಪೂರ್ವ ಕಮೆಂಗ್ ಜಿಲ್ಲೆಯ ಸೆಪ್ಪಾದಿಂದ ಚಯಾಂಗ್ ತಾಜೋವರೆಗೆ ಆಕಾಶದಿಂದ ಔಷದಿಯನ್ನು ತೆಗೆದೊಯ್ಯಲಾಯಿತು ಎಂದು ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಹೇಳಿದರು.