Monday, June 17, 2024

ಸತ್ಯ | ನ್ಯಾಯ |ಧರ್ಮ

T20ವಿಶ್ವಕಪ್: ಡಕ್ವರ್ತ್ ಲೂಯಿಸ್ ನಿಯಮಾನ್ವಯ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಜಯ

ಮೆಲ್ಬೊರ್ನ್‌ : ಮಳೆಯ ಕಾರಣದಿಂದಾಗಿ ಇಂದು ನಡೆದ ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ 5 ರನ್ ಗಳ ಅಂತರದಿಂದ ಜಯ ಸಾಧಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ಮೊದಲಿಗೆ ಐರ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸುವ ಭರವಸೆಯಲ್ಲಿತ್ತು. ಐರ್ಲೆಂಡ್ ನ ಅ್ಯಂಡ್ರ್ಯೂ ಬಲ್ಬರ್ನೀ ಮತ್ತು ಲೋರ್ಕಾನ್ ಟುಕರ್ ಇಂಗ್ಲೆಂಡ್ ಭರವಸೆಯನ್ನು ತಲೆ ಕೆಳಗಾಗಿ ಮಾಡಿಬಿಟ್ಟರು.

21 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ ನಂತರ ನೂರರ ಗಡಿ ದಾಟಿಸುವ ತನಕ ಇಂಗ್ಲೆಂಡ್ ಬೌಲರ್ ಗಳ ಬೆವರು ಇಳಿಸಿಬಿಟ್ಟರು.

ಅ್ಯಂಡ್ರ್ಯೂ ಬಲ್ಬರ್ನೀ ಮತ್ತು ಲೊರ್ಕನ್ ವಿಕೇಟ್ ಕಳೆದುಕೊಂಡ ನಂತರ ಐರ್ಲೆಂಡ್ ತಂಡದ ಆಟಗಾರರೆಲ್ಲಾ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.

ಅ್ಯಂಡ್ರೂ ಬಲ್ಬರ್ನೀ (62) ತಮ್ಮ ಅರ್ಧಶತಕದ ಬಲದೊಂದಿಗೆ ಐರ್ಲೆಂಡ್ 19.2 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 157 ರನ್ಗಳ ಮೊತ್ತವನ್ನು ಕಲೆಹಾಕಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಜೋಸ್ ಬಟ್ಲರ್ ಅವರನ್ನು ಮೊದಲ ಓವರ್ ನಲ್ಲಿಯೇ ಕಳೆದುಕೊಂಡಿತು. ನಂತರ ಮೂರನೇ ಓವರ್ ನಲ್ಲಿ ಅಲೆಕ್ಸ್ ಹೆಲ್ಸ್ ಅವರು ವಿಕೆಟ್ ಕಳೆದುಕೊಂಡದ್ದು ಇಂಗ್ಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿ ಪರಿಣಮಿಸಿತು.

ಡೇವಿಡ್ ಮಲನ್ (37) ಸ್ವಲ್ಪ ಹೊತ್ತು ಬ್ಯಾಟ್ ಹಿಡಿದು ನಿಂತಿದ್ದರೂ ಸಹ ಹೆಚ್ಚು ಕಾಲ ಉಳಿಯಲಿಲ್ಲ.

ಮತ್ತೊಂದೆಡೆ ಪಂದ್ಯಕ್ಕೆ ಮಳೆಯ ಆತಂಕ ಕಾಡುತ್ತಿದ್ದರೂ ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ರನ್ ರೇಟ್ ಉಳಿಸಿಕೊಳ್ಳಲಿಲ್ಲ. ಐರ್ಲೆಂಡ್ ತಂಡ ಫೀಲ್ಡಿಂಗ್ನಲ್ಲಿ ಎಡವಿದರೂ ಸಹ ಇಂಗ್ಲೆಂಡ್ ಯಾವುದನ್ನೂ ಸರಿಯಾಗಿ ಉಪಯೋಗಿಸಿಕೊಳ್ಳದೆ ತಮ್ಮ ವಿಕೆಟ್ ಗಳನ್ನು ನೀಡುತ್ತಾ ಹೋಗಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ ತಂಡ 5 ರನ್ ಗಳ ಅಂತರದಿಂದ ಜಯ ಸಾಧಿಸಿ ಸಂಭ್ರಮಿಸಿದರು.

ಸ್ಕೋರ್ ಕಾರ್ಡ್ :

ಐರ್ಲೆಂಡ್ : 157(19.2)

ಪಾಲ್ ಸ್ಟಿರ್ಲಿಂಗ್ : 14(18), ಅ್ಯಂಡ್ರ್ಯೂ ಬಲ್ಬರ್ನಿ : 62(47), ಲೋರ್ಕನ್ ಟುಕರ್ : 34(27), ಹ್ಯಾರಿ ಟೆಕ್ಟರ್ : 0(2), ಕರ್ಟೀಸ್ ಕ್ಯಾಂಪರ್ : 18(11), ಜಾರ್ಜ್ ಡೋಕ್ರೇಲ್ : 0(1), ಗೇರತ್ ಡೆಲಾನಿ : 12(10), ಮಾರ್ಕ್ ಅದೈರ್ : 4(4), ಬ್ಯಾರಿ ಮೆಕ್‌ಕಾರ್ತಿ : 3(3), ಫಿಯೋನ್ ಹ್ಯಾಂಡ್ : 1(2), ಜಾಸುಅ ಲಿಟ್ಲ್ : 0(1), ಇತರೆ : 9

ಬೌಲಿಂಗ್ :

ಬೆನ್ ಸ್ಟೋಕ್ಸ್ : 2.2-0-8-1, ಕ್ರಿಸ್ ವೂಕ್ಸ್ : 3-0-41-0, ಮಾರ್ಕ್ ವುಡ್ : 4-0-34-3, ಸ್ಯಾಮ್ ಕುರನ್ : 3-0-31-2, ಅದಿಲ್ ರಶೀದ್ : 4-0-24-0, ಲಿಅಮ್ ಲಿವಿಂಗ್ಸ್ಟನ್ : 3-0-17-3

ಇಂಗ್ಲೆಂಡ್ : 105-5(14.3)

ಜೋಸ್ ಬಟ್ಲರ್ : 0(2), ಅಲೆಕ್ಸ್ ಹಾಲ್ಸ್ : 7(5), ಡೇವಿಡ್ ಮಲಾನ್ : 35(27), ಬೆನ್ ಸ್ಟೋಕ್ಸ್ : 6(8), ಹ್ಯಾರಿ ಬ್ರೂಕ್ಸ್ : 18(21), ಮೊಯೀನ್ ಅಲಿ : 24(12), ಲಿಅಮ್ ಲಿವಿಗ್ಸ್ಟನ್ : 1(2), ಇತರೆ : 14

ಬೌಲಿಂಗ್

ಜೋಸುಅ ಲಿಟ್ಲ್ : 3-0-16-2, ಮಾರ್ಕ್ ಅದೈರ್ : 2-0-10-0, ಬೇರ್ರೀ ಮೆಕ್‌ಕಾರ್ತಿ : 3-0-20-1, ಫಿಯೋನ್ ಹ್ಯಾಂಡ್ : 2-0-17-1, ಗೇರತ್ ಡೆಲಾನಿ : 3.3-0-33-0, ಜಾರ್ಜ್ ಡೊಕ್ರೇಲ್ : 1-0-5-1

Related Articles

ಇತ್ತೀಚಿನ ಸುದ್ದಿಗಳು