Sunday, June 16, 2024

ಸತ್ಯ | ನ್ಯಾಯ |ಧರ್ಮ

ರಾಹುಲ್ ಗಾಂಧಿ ಅವರ ಪಾದಯಾತ್ರೆ ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ : ಬಿ.ಕೆ. ಹರಿಪ್ರಸಾದ್

2014ರಲ್ಲಿ ವಿಶ್ವಗುರು ಕಾಂಗ್ರೆಸ್ ಮುಕ್ತ ಭಾರತ ಎಂದು ಪ್ರಚಾರ ಘೋಷಣೆ ಮಾಡಿದ್ದರು. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಆರಂಭಿಸಿದ ಈ ಯಾತ್ರೆಯಲ್ಲಿ ನಿತ್ಯ ಲಕ್ಷಾಂತರ ಮಂದಿ ಉತ್ಸಾಹ ನೀಡುತ್ತಿರುವುದನ್ನು ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.

ಬಳ್ಳಾರಿಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಭಾರತ ಜೋಡೋ ಯಾತ್ರೆ 1000 ಕಿ.ಮೀ ದೂರ ಕ್ರಮಿಸಿ ಬಳ್ಳಾರಿಗೆ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಸೆ.30ರಂದು ಆರಂಭವಾದ ಈ ಯಾತ್ರೆ 429 ಕಿ.ಮೀ ಪೂರ್ಣಗೊಳಿಸಿ ಇಂದು ರಾಹುಲ್ ಗಾಂಧಿ ಅವರು ನಿಮ್ಮನ್ನು ಉದ್ದೇಶಿಸಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿ ಅವರು ರಾಜಕೀಯ ದುರುದ್ದೇಶಕ್ಕೆ ಈ ಪಾದಯಾತ್ರೆ ಮಾಡುತ್ತಿಲ್ಲ. ದೇಶದ ತ್ರಿವರ್ಣ ಧ್ವಜ, ಅಂಬೇಡ್ಕರ್ ಅವರ ಸಂವಿಧಾನ, ನಮ್ಮ ಹಕ್ಕು ಪ್ರತಿಪಾದಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ನಮ್ಮೆಲ್ಲರ ನೆಚ್ಚಿನ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪಾದಯಾತ್ರೆ ಮೂಲ ಉದ್ದೇಶ ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ ದೇಶವನ್ನು ದ್ವೇಷಮುಕ್ತ, ಹಿಂಸೆ ಮುಕ್ತ, ನಿರುದ್ಯೋಗ ಮುಕ್ತ, ಪ್ರಜಾಪ್ರಭುತ್ವ ರಕ್ಷಿಸುವ, ಬಡಮುಕ್ತ ಭಾರತ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆಯಾಗಿದೆ. ಭಾರತ ಯಾತ್ರೆ, ರಾಜ್ಯದ ಪ್ರದೇಶ ಯಾತ್ರಿ, ಅಥಿಥಿ ತ್ರಿಗಳಿದ್ದಾರೆ. ನಮ್ಮ ರಾಜ್ಯದಲ್ಲಿ ನಿತ್ಯ 1 ಲಕ್ಷ ಜನ ಹೆಜ್ಜೆ ಹಾಕಿದ್ದು, ವಿಶ್ವದಲ್ಲಿ ಇದು ಐತಿಹಾಸಿಕ ಯಾತ್ರೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ನೇತೃತ್ವದಲ್ಲಿ ಯಾತ್ರೆ ನಡೆದಿದ್ದು, ಸ್ವಾತಂತ್ರ್ಯದ ನಂತರ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ಈ ಯಾತ್ರೆ ನಡೆಯುತ್ತಿದೆ ಎಂದಿದ್ದಾರೆ.

ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನ ಇವೆಲ್ಲವಕ್ಕೂ ಆರ್,ಎಸ್‌,ಎಸ್‌ ಮತ್ತು ಸಂಘ ಪರಿವಾರ ವಿರೋಧ ಮಾಡುತ್ತಿದೆ. ಇದನ್ನು ಬಹಿರಂಗವಾಗಿ ಮತ್ತು ಆಡಳಿತಾತ್ಮಕವಾಗಿ ಅವರು ವಿರೋಧ ಮಾಡುತ್ತಿದ್ದಾರೆ, ಇದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಇಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು, ನಾನು ಮುಖ್ಯಮಂತ್ರಿಯಾಗಿರುವುದು ಕೂಡ ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ. ಇದನ್ನೇ ನಾಶ ಮಾಡಲು ಹೊರಟಿದ್ದೀರಲ್ವಾ ನಿಮಗೆ ನಾಚಿಕೆಯಾಗಲ್ವಾ?  ಎಂದು ಪ್ರಶ್ನಿಸಿದ್ದಾರೆ.

ನಾನು ರಾಹುಲ್‌ ಗಾಂಧಿ ಅವರಿಗೆ ಭಾರತ ಐಕ್ಯತಾ ಯಾತ್ರೆ ಎಂಬ ದೊಡ್ಡ ಸಾಹಸಕ್ಕೆ ಕೈ ಹಾಕಿರುವುದಕ್ಕಾಗಿ ತುಂಬುಹೃದಯದಿಂದ ನಮಸ್ಕಾರ ಮಾಡುತ್ತೇನೆ, ನಾವೆಲ್ಲರೂ ರಾಹುಲ್‌ ಗಾಂಧಿ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ, ಕರ್ನಾಟಕದಲ್ಲಿ ಪಾದಯಾತ್ರೆಯು ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ಭರವಸೆಯನ್ನು ನಾನು ರಾಹುಲ್‌ ಗಾಂಧಿ ಅವರಿಗೆ ನೀಡಲು ಬಯಸುತ್ತೇನೆ. ಇದು ನೂರಕ್ಕೆ ನೂರರಷ್ಟು ಸತ್ಯ.

ರಾಹುಲ್ ಗಾಂಧಿ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಸಾವಿರಾರು ಜನ ಪ್ರಯತ್ನಿಸಿದ್ದು, ಅವರಿಗೆ ಭದ್ರತೆ ಕಾರಣದಿಂದ ಅವಕಾಶ ನೀಡಲಿಲ್ಲ. ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಈ ಯಾತ್ರೆಗೆ ಬೆಂಬಲ ನೀಡಿರುವ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು