ಆಮಾದ್ಮಿ ಬ್ರಷ್ಟಾಚಾರಂದಿಂದ ಬೇಸತ್ತಿದ್ದ ಮತದಾರರು ಈ ಬಾರಿ ಬಿಜೆಪಿಗೆ ಬೆಂಬಲಿಸಿದ್ದಾರೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ದಿಲ್ಲಿ ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಆಪ್ ಅಧಿಕಾರಕ್ಕೇರುವ ಆಸೆಗೆ ತಣ್ಣೀರು ಬಿದ್ದಿದೆ. ಬಿಜೆಪಿ ಗೆಲುವಿನ ನಗೆ ಬೀರಿದ್ದು, ಈ ಬಗ್ಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತಾಡಿದ ಜಗದೀಶ್ ಶೆಟ್ಟರ್ , ದೆಹಲಿ ಜನ ಬಿಜೆಪಿಗೆ ಆಶೀರ್ವಾದ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಪಕ್ಷ ಎಲ್ಲಿಯವರೆಗೆ ರಾಹುಲ್‌ ಗಾಂಧಿ ಅವರ ನಾಯಕತ್ವವನ್ನು ನೆಚ್ಚಿಕೊಂಡಿರುತ್ತದಯೋ, ಅಲ್ಲಿಯವರೆಗೆ ಆ ಪಕ್ಷ ಉದ್ಧಾರವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಅರವಿಂದ್‌ ಕೇಜ್ರಿವಾಲ್‌ ಮತ್ತು ಆಮ್‌ ಆದ್ಮಿ ಪಕ್ಷ ದಿಂದ ರೋಸಿ ಹೋಗಿದ್ದರು. ಕೇವಲ ಬಾಯಿ ಮಾತಿನಲ್ಲಿ ತಮ್ಮದು ವಿನೂತನ ರಾಜಕಾರಣ ಎಂದು ಹೇಳುತ್ತಿದ್ದ ಆಪ್‌ ನಾಯಕರು, ಲಿಕ್ಕರ್‌ ಹಗರಣ, ಅರಮನೆಯಂತಹ ಮನೆ ನಿರ್ಮಿಸಿಕೊಳ್ಳುವುದಲ್ಲಿ ನಿರತರಾಗಿದ್ದರು. ಭ್ರಷ್ಟಾಚಾರ ದಿಂದ ಬೇಸತ್ತಿದ್ದ ಮತದಾರರು ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

Related Articles

ಇತ್ತೀಚಿನ ಸುದ್ದಿಗಳು