Monday, January 12, 2026

ಸತ್ಯ | ನ್ಯಾಯ |ಧರ್ಮ

ಬಿಜೆಪಿಯು ವ್ಯಾಪಾರಿಗಳಿಗೆ ಅನುಕೂಲದ ಬದಲು ಕಷ್ಟ ನೀಡಿದ್ದೇಕೆ?: ಕಾಂಗ್ರೆಸ್

ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಕುಶಲಕರ್ಮಿಗಳ, ವ್ಯಾಪಾರಿಗಳ ನೆರವಿಗಾಗಿ PPP ಮಾದರಿಯ ಶಾಪಿಂಗ್ ಸಂಕೀರ್ಣಗಳನ್ನು ನಿರ್ಮಿಸುತ್ತೇವೆ ಎಂದಿದ್ದ ಬಿಜೆಪಿಗೆ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಕುಶಲಕರ್ಮಿಗಳ, ವ್ಯಾಪಾರಿಗಳ ನೆರವಿಗಾಗಿ PPP ಮಾದರಿಯ ಶಾಪಿಂಗ್ ಸಂಕೀರ್ಣಗಳನ್ನು ನಿರ್ಮಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ವ್ಯಾಪಾರಿಗಳಿಗೆ ಸಿಕ್ಕಿದ್ದು GST ಹೊರೆ, ಬೆಲೆ ಏರಿಕೆಯ ಬರೆ, ಲಾಕ್‌ಡೌನ್ ನಷ್ಟ, ಆರ್ಥಿಕತೆಯ ಕುಸಿತವಷ್ಟೇʼ ಎಂದು ಟೀಕಿಸಿದೆ.

ಭರವಸೆ ಕೊಟ್ಟು ವ್ಯಾಪಾರಿಗಳಿಗೆ ಅನುಕೂಲದ ಬದಲು ಕಷ್ಟ ನೀಡಿದ್ದೇಕೆ? ಎಂದು ಕಾಂಗ್ರೆಸ್‌ ಬಿಜೆಪಿಗೆ ಪ್ರಶ್ನೆ ಮಾಡಿ ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page