Sunday, August 3, 2025

ಸತ್ಯ | ನ್ಯಾಯ |ಧರ್ಮ

ಕಾದು ನೋಡಿ, ನಾಳೆ ಸಮೀಕ್ಷೆಗಳು ಉಲ್ಟಾ ಆಗಲಿವೆ: ಸೋನಿಯಾಗಾಂಧಿ

ನವದೆಹಲಿ: ಎಲ್ಲ ಸಮೀಕ್ಷೆಗಳು ನಾಳೆ ಉಲ್ಟಾ ಆಗಲಿವೆ. ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ (ಜೂನ್‌ 4)ವರೆಗೂ ಕಾಯಿರಿ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಲೋಕಸಬಾ ಚುನಾವಣಾ ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ‘ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲರೂ ಕಾದು ನೋಡಬೇಕಿದೆ. ನಮ್ಮ ಫಲಿತಾಂಶವು ಮತಗಟ್ಟೆ ಸಮೀಕ್ಷೆಗಳಿಗೆ ವಿರುದ್ಧವಾಗಿರಲಿದೆ. ನಿಜವಾದ ಫಲಿತಾಂಶವನ್ನು ನೀವು ನಾಳೆ ನೋಡಲಿದ್ದೀರಿ’ ಎಂದರು.

ಬೋಗಸ್‌ ಸಮೀಕ್ಷೆ: ಮತಗಟ್ಟೆ ಸಮೀಕ್ಷೆಗಳನ್ನು ‘ಬೋಗಸ್ ಎಂದು ಕಾಂಗ್ರೆಸ್‌ ಅಪಾದಿಸಿದೆ. ಇದು ಚುನಾವಣಾ ಅಕ್ರಮವನ್ನು ಸಮರ್ಥಿಸಿಕೊಳ್ಳುವ ಉದ್ದೇಶ ಪೂರ್ವಕ ಪ್ರಯತ್ನವಾಗಿದೆ. ಇಂಡಿಯಾ ಕೂಟದ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ ‘ಒತ್ತಡ ತಂತ್ರ’ದ ಭಾಗ ಬಿಜೆಪಿ ಬೆಂಬಲಿತ ಇಂಥ ಸಮೀಕ್ಷೆಗಳು ಹೊರ ಬರುತ್ತಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಾಹುಲ್‌ ಗಾಂಧಿಯವರು ಪಕ್ಷದ ಸಂಸದರ ಜತೆ ವಿಡಿಯೊ ಸಂವಾದ ನಡೆಸಿದ ನಂತರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾತನಾಡಿ, ಇವುಗಳನ್ನು ಮತಗಟ್ಟೆ ಸಮೀಕ್ಷೆ ಎನ್ನಲಾಗುವುದಿಲ್ಲ. ಇವು ಪ್ರಾಯೋಜಿತ ಮೋದಿ ಮಾಧ್ಯಮ ಸಮೀಕ್ಷೆ. ಮೋದಿ ಅವರ ಕಾಲ್ಪನಿಕ ಸಮೀಕ್ಷೆಗಳು ಎಂದು ವ್ಯಂಗ್ಯವಾಡಿದ್ದರು.

‘ಮತಗಟ್ಟೆ ಸಮೀಕ್ಷೆಗಳು ಚುನಾವಣಾ ಅಕ್ರಮವನ್ನು, ಇವಿಎಂಗಳ ಕೈವಾಡವನ್ನು ಸಮರ್ಥಿಸುವ ಉದ್ದೇಶ ಪೂರ್ವಕ ಪ್ರಯತ್ನವಾಗಿವೆ. ನಾವು ಹೆದರಿಕೊಳ್ಳುವುದಿಲ್ಲ. ಮತಗಟ್ಟೆ ಸಮೀಕ್ಷೆಗಳಿಗಿಂತ ಸಂಪೂರ್ಣ ಭಿನ್ನವಾದ, ನಿಜವಾದ ಫಲಿತಾಂಶವನ್ನು ಜೂನ್ 4ರಂದು ನೋಡಲಿದ್ದೀರಿ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page