Home ದೇಶ ಸದನ ಸಮಿತಿಯಿಂದ ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ; ಇಂದು ಕರಡು ಸಲ್ಲಿಕೆ

ಸದನ ಸಮಿತಿಯಿಂದ ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ; ಇಂದು ಕರಡು ಸಲ್ಲಿಕೆ

0

ವಕ್ಫ್ ತಿದ್ದುಪಡಿ ವಿಧೇಯಕ ಪರಿಶೀಲನೆಗೆಂದು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಬುಧವಾರ ಪರಿಷ್ಕೃತ ಕರಡು ವರದಿಯನ್ನು ಅಂಗೀಕರಿಸಿದೆ. ಆದರೆ, ಸಮಿತಿಯಲ್ಲಿನ ವಿಪಕ್ಷಗಳ ಸಂಸದರು ಈ ಕ್ರಮವನ್ನು ಅಸಾಂವಿಧಾನಿಕ ಎಂದು ಟೀಕಿಸಿವೆ. ಜ.31ರಿಂದ ಸಂಸತ್‌ನ ಬಜೆಟ್‌ ಅಧಿವೇಶನ ಶುರುವಾಗಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಸಭೆ ಬಗ್ಗೆ ಮಾಹಿತಿ ನೀಡಿದ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌, 15-11 ಮತಗಳ ಅಂತರದಿಂದ ಕರಡು ವರದಿಯನ್ನು ಅಂಗೀಕರಿಸಲಾಯಿತು. ವಿಪಕ್ಷಗಳ ಸಂಸದರು ಪ್ರಸ್ತಾಪಿಸಿದ್ದ ಎಲ್ಲ ಸಂಶಯಗಳನ್ನೂ ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಮಸ್ಲಿಂ ಸಮುದಾಯದ ದತ್ತಿ ಸಂಸ್ಥೆಗಳು ನೀಡುವ ನೆರವಿನ ಫ‌ಲಾನುಭವಿಗಳ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗದ ಮುಸ್ಲಿಮರು, ಮಹಿಳೆಯರು, ಬಡವರು, ಅನಾಥರನ್ನು ಸೇರಿಸಲಾಗಿದೆ ಎಂದಿದ್ದಾರೆ. ಲೋಕಸಭೆ ಸ್ಪೀಕರ್‌ಗೆ ಗುರುವಾರ ವರದಿ ಸಲ್ಲಿಸಲಾಗುತ್ತದೆ ಎಂದೂ ಹೇಳಿದ್ದಾರೆ.

ಸಭೆ ನಡೆಸಿ ವರದಿ ಅಂಗೀಕರಿಸಿದ ರೀತಿಯನ್ನು ವಿಪಕ್ಷಗಳ ಸದಸ್ಯರು ಖಂಡಿಸಿದ್ದಾರೆ. ಮಂಗಳವಾರ ರಾತ್ರಿ 655 ಪುಟಗಳ ವರದಿ ನೀಡಲಾಯಿತು. ಅದನ್ನು ಅಧ್ಯಯನ ನಡೆಸಲು ಅಲ್ಪಾವಧಿಯ ಸಮಯ ಸಿಕ್ಕಿತ್ತು ಎಂದು ದೂರಿದ್ದಾರೆ.

You cannot copy content of this page

Exit mobile version