Sunday, August 3, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಗಾಗಿ ಚುನಾವಣಾ ಆಯೋಗದಿಂದ ಚುನಾವಣಾ ಅಕ್ರಮ; ನಮ್ಮ ಬಳಿ ʼಆಟಂ ಬಾಂಬ್‌ʼ ರೀತಿಯ ಸಾಕ್ಷ್ಯ ಇದೆ: ರಾಹುಲ್

ಬಿಹಾರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ತೀವ್ರ ಗದ್ದಲ ನಡೆಯುತ್ತಿರುವ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಗಾಗಿ ಮತಗಳ್ಳತನದಲ್ಲಿ ತೊಡಗಿರುವ ಚುನಾವಣಾ ಆಯೋಗದ ಹುನ್ನಾರವನ್ನು ಬಯಲು ಮಾಡಲು ಕಾಂಗ್ರೆಸ್ ಬಳಿ ‘ಅಣುಬಾಂಬ್‌ನಂತಹ’ ಸಾಕ್ಷ್ಯ ಇದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ. ಆ ಅಣುಬಾಂಬ್‌ ಸಿಡಿದರೆ ಚುನಾವಣಾ ಆಯೋಗಕ್ಕೆ ಈ ಜಗತ್ತಿನಲ್ಲಿ ಎಲ್ಲಿಯೂ ಅಡಗಿಕೊಳ್ಳಲು ಜಾಗ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ದೇಶದ್ರೋಹದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ ಎಂಬ ವಿಷಯವನ್ನು ಚುನಾವಣಾ ಆಯೋಗದ ಕೆಳ ಹಂತದ ನೌಕರರಿಂದ ಹಿಡಿದು ಉನ್ನತ ಅಧಿಕಾರಿಯವರೆಗೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬಿಹಾರದ ಮತದಾರರ ಪಟ್ಟಿಯ ಕರಡು ಪ್ರಕಟವಾದ ಸಂದರ್ಭದಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ. ಆದರೆ, ರಾಹುಲ್ ಅವರ ಆರೋಪಗಳು ಆಧಾರರಹಿತ ಎಂದು ಚುನಾವಣಾ ಆಯೋಗವು ಖಂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page