Wednesday, July 17, 2024

ಸತ್ಯ | ನ್ಯಾಯ |ಧರ್ಮ

ಪಶ್ಚಿಮ ಬಂಗಾಳ: ಸಿಕ್ಕಿಂ ಮಾಜಿ ಸಚಿವರ ಮೃತದೇಹ ನಾಲೆಯೊಂದರಲ್ಲಿ ಪತ್ತೆ

ಗ್ಯಾಂಗ್ಟಕ್: ಸಿಕ್ಕಿಂನ ಮಾಜಿ ಸಚಿವ ಆರ್‌.ಸಿ.ಪೌಡ್ಯಾಲ್ ಮೃತದೇಹವು ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ನಾಲೆಯೊಂದರಲ್ಲಿ ಪತ್ತೆಯಾಗಿದೆ ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಫುಲ್ಬರಿಯಲ್ಲಿನ ತೀಸ್ತಾ ನಾಲೆಯಲ್ಲಿ 80 ವರ್ಷ ವಯಸ್ಸಿನ ಪೌಡ್ಯಾಲ್ ಅವರ ಮೃತದೇಹ ತೇಲುತ್ತಿತ್ತು ಎಂದು ಅವರು ಹೇಳಿದ್ದಾರೆ. ಪೌಡ್ಯಾಲ್‌ ಅವರು ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದರು ಎಂದು ಬುಧವಾರ ಪೊಲೀಸರು ತಿಳಿಸಿವೆ.

ಜುಲೈ 7ರಂದು ಹಿರಿಯ ರಾಜಕಾರಣಿಯಾದ ಪೌಡ್ಯಾಲ್ ಪಾಕ್ಯಾಂಗ್ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಛೋಟಾ ಸಿಂಗ್ಟಮ್‌ನಿಂದ ನಾಪತ್ತೆಯಾದ ನಂತರ, ಅವರ ಶೋಧಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಮೇಲ್ನೋಟಕ್ಕೆ ನದಿಯ ಮೇಲ್ಭಾಗದಿಂದ ಅವರ ಮೃತದೇಹವು ತೀಸ್ತಾ ನದಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅವರು ತೊಟ್ಟಿದ್ದ ಕೈಗಡಿಯಾರ ಹಾಗೂ ಬಟ್ಟೆಗಳ ಮೂಲಕ ಅವರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್.ಸಿ.ಪೌಡ್ಯಾಲ್ ಅವರು ಮೊದಲ ಸಿಕ್ಕಿಂ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದರು. ನಂತರ, ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಸಾವಿನ ಕುರಿತು ತನಿಖೆ ಮುಂದುವರೆದಿರುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು