Wednesday, June 26, 2024

ಸತ್ಯ | ನ್ಯಾಯ |ಧರ್ಮ

ಅಮೇರಿಕಾದಲ್ಲಿ ಮೋದಿಯ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸಿರುವ ಶಾಸಕರು ಹೇಳೋದೇನು?

ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿ ಮತ್ತು ಇಂದು ನಡೆಯಲಿರುವ ಜಂಟಿ ಕಾಂಗ್ರೆಸ್ ಭಾಷಣದ ವಿಚಾರವಾಗಿ ಮತ್ತೆ ಅಪಸ್ವರ ಕೇಳಿ ಬಂದಿದೆ. ಅಮೇರಿಕಾದ ಇಬ್ಬರು ಶಾಸಕರುಗಳಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಆಡಳಿತ ಪಕ್ಷದ ಧಮನಕಾರಿ ನಡೆ, ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆತಂಕದಲ್ಲಿ ಬದುಕು ನಡೆಸುತ್ತಿರುವ ಭಾರತದ ಅಲ್ಪಸಂಖ್ಯಾತರನ್ನು ಉಲ್ಲೇಖಿಸಿ ಇಬ್ಬರು ಶಾಸಕರು ಮೋದಿಯವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ತಮ್ಮ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಮತ್ತು 25 ರ ನಡುವೆ ಅಮೇರಿಕಾ ಮತ್ತು ಈಜಿಪ್ಟ್‌ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಇಂದಿನ ಕೊನೆಯ ದಿನದ ಅಮೇರಿಕಾ ಭೇಟಿಯಲ್ಲಿ ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿದೆ.

ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಬಹಿಷ್ಕರಿಸಿರುವ ಶಾಸಕರಾದ ಇಲ್ಹಾನ್ ಒಮರ್ “ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳನ್ನು ಉತ್ತೇಜಿಸಿದೆ ಮತ್ತು ಭಾರತದ ಪತ್ರಕರ್ತರು / ಮಾನವ ಹಕ್ಕುಗಳ ಹೋರಾಟಗಾರರಿಗೆ ಭಯದ ವಾತಾವರಣ ನಿರ್ಮಿಸಿದೆ. ನಾನು ಮೋದಿ ಭಾಷಣದಲ್ಲಿ ಭಾಗವಹಿಸುವುದಿಲ್ಲ. ಮೋದಿಯವರ ದಮನ ಮತ್ತು ಹಿಂಸಾಚಾರದ ದಾಖಲೆಯನ್ನು ಚರ್ಚಿಸಲು ನಾನು ಮಾನವ ಹಕ್ಕುಗಳ ಗುಂಪುಗಳೊಂದಿಗೆ ಚರ್ಚೆ ನಡೆಸುತ್ತೇನೆ, ”ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://twitter.com/IlhanMN/status/1671302972699996160?t=ZDCUtPqkmi1gbjoC6_fgiQ&s=19

ಅಮೇರಿಕಾದ ಮತ್ತೋರ್ವ ಕಾಂಗ್ರೆಸ್ ಶಾಸಕಿಯಾದ ರಶೀದಾ ತ್ಲೈಬ್, “ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಮತ್ತು ಭಾರತೀಯ ಪತ್ರಕರ್ತರನ್ನು ದೂರವಿರಿಸುವುದನ್ನು ಮಾಡುವ ಮೋದಿಯವರ ಸುದೀರ್ಘ ಇತಿಹಾಸವು ಸ್ವೀಕಾರಾರ್ಹವಲ್ಲ. ನಾನು ಕಾಂಗ್ರೆಸ್ ಅನ್ನು ಉದ್ದೇಶಿಸುವ ಮೋದಿಯವರ ಜಂಟಿ ಭಾಷಣವನ್ನು ಬಹಿಷ್ಕರಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

https://twitter.com/RepRashida/status/1671179922197340160?t=KCJI6cdYDRNZDI5j_XLkIw&s=19

ಏತನ್ಮಧ್ಯೆ, ಅಮೇರಿಕಾ ಕಾಂಗ್ರೆಸ್‌ನ 70 ಕ್ಕೂ ಹೆಚ್ಚು ಡೆಮಾಕ್ರಟಿಕ್ ಸದಸ್ಯರು ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಮಾತನಾಡುವ ಅಧಿವೇಶನಕ್ಕೆ ಸಾಕ್ಷಿಯಾಗಲಿದೆ. ನಂತರ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಜೂನ್ 22 ರಂದು ಆಯೋಜಿಸಿರುವ ಭೋಜನಕೂಟದಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಲಿದ್ದಾರೆ.

ಇನ್ನು ಮೋದಿ ಭಾಷಣವನ್ನು ಬಹಿಷ್ಕರಿಸಿರುವ ಅಮೇರಿಕಾ ಶಾಸಕರು “ಭಾರತವು ತನ್ನ ಇತಿಹಾಸದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಗ ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕದಲ್ಲಿ ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ರಾಜಕೀಯ ಪಕ್ಷಗಳ ಮೇಲಿನ ಅಭಿವ್ಯಕ್ತಿಯ ಹಿಡಿತವನ್ನೂ ಕೂಡಾ ಅಲ್ಲಿನ ಮೋದಿ ಸರ್ಕಾರ ಬಿಗಿಗೊಳಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಅಂಶ. ಅದೇ ರೀತಿ, ಭಾರತದಲ್ಲಿನ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ 2022 ರ ವರದಿಯು ಆತಂಕಕಾರಿ ಎನ್ನಿಸಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಲ್ಲಿನ ಮಾನವ ಹಕ್ಕು ಸಂಘಟನೆಗಳು ‘ವೈಟ್ ಹೌಸ್ ಗೆ ಅವಮಾನ’ ಎಂಬಂತೆ ಅಭಿಯಾನ ಮಾಡುತ್ತಿವೆ. ಇದರ ಜೊತೆಗೆ ಭಾರತದ ಒಳಗಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆಯೂ ಚರ್ಚೆ ಮತ್ತು ಸಂವಾದಗಳನ್ನು ಏರ್ಪಡಿಸಿವೆ. ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಈ ಸಾಕ್ಷ್ಯಚಿತ್ರ ಕೂಡಾ ಅಲ್ಲಿನ ಪ್ರತಿರೋಧ ಸಭೆಯಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು