Saturday, March 15, 2025

ಸತ್ಯ | ನ್ಯಾಯ |ಧರ್ಮ

ಒಪ್ಪಿತ ಪ್ರಣಯದ ಸಂಗತಿಗಳಲ್ಲಿ “ಪೋಕ್ಸೋ” ಬಳಕೆಯ ಬಗ್ಗೆ ನ್ಯಾಯಾಲಯದ ಅಭಿಪ್ರಾಯವೇನು? ಈ ಸ್ಟೋರಿ ಓದಿ

ಭಾರತದಲ್ಲಿ ಕಾಯ್ದೆ ಕಾನೂನುಗಳ ಜಾರಿಯ ಜೊತೆಗೆ ಅದರ ದುರ್ಬಳಕೆ ಸಹ ಹಲವು ಅವಘಡಗಳಿಗೆ ಕಾರಣವಾಗುತ್ತಿರುವುದು ಇಂದು ನಿನ್ನೆಯದಲ್ಲ. ಕಾಯ್ದೆಗಳ ದುರ್ಬಳಕೆಯಿಂದಾಗಿ ಎಷ್ಟೋ ಕಾಯ್ದೆ ಕಾನೂನುಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಸೃಷ್ಟಿಯಾಗಿವೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿ ಒಂದು ನಿರ್ಧಾರಕ್ಕೆ ಬರುವುದುಂಟು.

ಪ್ರಸ್ತುತ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (POCSO) ಕಾಯ್ದೆ ಕೂಡಾ ಇತ್ತೀಚೆಗೆ ದುರ್ಬಳಕೆ ಆಗುತ್ತಿರುವುದನ್ನು ಗಮನಿಸಿದ ಉತ್ತರ ಪ್ರದೇಶದ ಅಲಹಾಬಾದ್​ ಹೈಕೋರ್ಟ್​ ಮಹತ್ವದ ತೀರ್ಪೊಂದನ್ನು ನೀಡಿದೆ. ಹದಿಹರೆಯದವರ ನಡುವಿನ ಒಮ್ಮತದ ಪ್ರಣಯ ಸಂಬಂಧವನ್ನು ಪೋಕ್ಸೋ ಕಾಯ್ದೆಯಡಿ ಅಪರಾಧೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಲು ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (POCSO) ಕಾಯ್ದೆಯನ್ನು ರೂಪಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಪೋಕ್ಸೋ ಕಾಯ್ದೆಯು ಹದಿಹರೆಯದವರ ಶೋಷಣೆಯ ಸಾಧನವಾಗಿ ಮಾರ್ಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಪ್ರೀತಿಯಿಂದ ಹುಟ್ಟುವ ಸಹಮತದ ಪ್ರಣಯವನ್ನು ಪರಿಗಣಿಸಬೇಕು. ಹದಿಹರೆಯದವರ ನಡುವಿನ ಒಮ್ಮತದ ಪ್ರಣಯ ಸಂಬಂಧವನ್ನು ಪೋಕ್ಸೋ ಕಾಯ್ದೆಯಡಿ ಅಪರಾಧೀಕರಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ ಹೇಳಿದೆ‌.

ಅಷ್ಟೆ ಅಲ್ಲದೆ ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಹೇಳಿಕೆಯನ್ನು ನಿರ್ಲಕ್ಷಿಸಿದರೆ ಮತ್ತು ಆರೋಪಿಯನ್ನು ಜೈಲಿನಲ್ಲಿ ಕಂಬಿ ಎಣಿಸಲು ಬಿಟ್ಟರೆ ಅದು ನ್ಯಾಯವನ್ನು ವಿರೂಪಗೊಳಿಸಿದಂತೆ ಎಂದು ನ್ಯಾಯಾಲಯ ಹೇಳಿದೆ.

ಅಂದಹಾಗೆ ಈ ವಿಚಾರ ಮುನ್ನೆಲೆಗೆ ಬಂದದ್ದು ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಕ್ರಿಶನ್ ಪಹಲ್ ಅವರು ಈ ಅಂಶಗಳನ್ನು ಹೇಳಿದರು. ಈ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ), 366 (ಆಕೆಯ ಇಚ್ಛೆಗೆ ವಿರುದ್ಧವಾಗಿ ಯಾವುದೇ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸುವ ಉದ್ದೇಶದಿಂದ ಮಹಿಳೆಯ ಅಪಹರಣ) ಮತ್ತು 15 ವರ್ಷದ ಬಾಲಕಿಗೆ ಲೈಂಗಿಕ ಆಮಿಷವೊಡ್ಡಿದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಜಲೌನ್ ಜಿಲ್ಲೆಯ ಅಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page