Thursday, September 19, 2024

ಸತ್ಯ | ನ್ಯಾಯ |ಧರ್ಮ

WhatsApp ನಲ್ಲಿ Instagram ತರಹದ ವೈಶಿಷ್ಟ್ಯ: ಸ್ಟೇಟಸ್ಸಿನಲ್ಲಿ ಮೆನ್ಷನ್‌ ಫೀಚರ್

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಈಗ ಕಂಪನಿಯು ಮತ್ತೊಂದು ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ.

ಈ ಸೌಲಭ್ಯವನ್ನು ಬಳಸಿ ಬಳಕೆದಾರರು ತಮ್ಮ ಸ್ಟೇಟಸ್ಸಿನಲ್ಲಿ ಇನ್ನೊಬ್ಬರನ್ನು ಟ್ಯಾಗ್ ಮಾಡಬಹುದು. ಅಂದರೆ ಸ್ಟೇಟಸ್ಸಿನಲ್ಲಿ ಬೇರೆಯವರ ಹೆಸರನ್ನು ನಮೂದಿಸಬಹುದು. ಈ ಫೀಚರ್‌ ಪ್ರೈವಐಟ್‌ ಆಗಿರುತ್ತದೆ. ಈ ಸ್ಟೇಟಸ್ಸನ್ನು ಸ್ಟೇಟಸ್‌ ಹಾಕಿದವರು ಹಾಗೂ ಮೆನ್ಷನ್‌ ಆಗಿರುವವರು ಮಾತ್ರ ನೋಡಬಹುದು.

ಇದುವರೆಗೆ ನಾವು ಯಾರನ್ನಾದರೂ WhatsApp ನಲ್ಲಿ ಟ್ಯಾಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಹೊಸ ಅಪ್ಡೇಟ್ ನಂತರ, ಫೋನ್‌ನಲ್ಲಿ ಸೇವ್‌ ಮಾಡಿಕೊಂಡಿರುವ ಕಾಂಟ್ಯಾಕ್ಟ್‌ಗಳನ್ನು ಸ್ಟೇಟಸ್ಸಿನಲ್ಲಿ ಟ್ಯಾಗ್ ಮಾಡಬಹುದು. ಸ್ಥಿತಿಯನ್ನು ಟ್ಯಾಗ್ ಮಾಡುವುದರಿಂದ ನಿಕಟ ಸ್ನೇಹಿತರೊಂದಿಗೆ ಹೆಚ್ಚು ಸಂವಹನ ನಡೆಸಲು ನಿಮಗೆ ಅನುಮತಿಸುತ್ತದೆ.
ಮುಂದಿನ ದಿನಗಳಲ್ಲಿ ಮೆಟಾ ಎಐ ಬಳಸಿ ನೀವು ಸೆಲೆಬ್ರಿಟಿಗಳ ದನಿಯಲ್ಲಿ ಮಾತನಾಡಬಹುದಾದ ವೈಶಿಷ್ಟ್ಯವನ್ನು ಸಹ ವಾಟ್ಸಾಪ್‌ ಪರಿಚಯಿಸಲಿದೆ.

ಈ ಮುಂಬರುವ ವೈಶಿಷ್ಟ್ಯವನ್ನು “ಮೆನ್ಷನ್ಸ್” ಎಂದು ಕರೆಯಲಾಗುತ್ತದೆ. ಈ ಆಯ್ಕೆಯು Instagram ಸ್ಟೋರಿಗಳಲ್ಲಿ ಬಳಸಲಾಗುವ ಮೆನ್ಷನ್‌ ಫೀಚರ್‌ ರೀತಿಯಲ್ಲೇ ಕೆಲಸ ಮಾಡಲಿದೆ.

ವೈಶಿಷ್ಟ್ಯವನ್ನು ಹೇಗೆ ಬಳಸುವುದು?

WhatsApp ನಲ್ಲಿ ಸ್ಟೇಟಸ್ ಪೋಸ್ಟ್ ಮಾಡುವಾಗ ‘ಮೆನ್ಷನ್ಸ್’ ಫೀಚರ್‌ ಬಳಸಿ ಯಾರನ್ನಾದರೂ ಟ್ಯಾಗ್ ಮಾಡಲು, ‘@’ ಐಕಾನ್/ಚಿಹ್ನೆಯನ್ನು ಬಳಸಬೇಕು. ಹೀಗೆ ನೀವು ಅವರನ್ನು ಮೆನ್ಷನ್‌ ಮಾಡಿದಾಗ ಅವರಿಗೆ ನೋಟಿಫಿಕೇಷನ್‌ ಹೋಗುತ್ತದೆ. ಅವರು ಆ ಸ್ಟೇಟಸ್‌ ನೋಟಲು ಹಾಗೂ ಅದನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಟೇಟಸ್ಸಿನಲ್ಲಿ ಟ್ಯಾಗ್‌ ಮಾಡಲಾಗಿರುವ ಹೆಸರು ಟ್ಯಾಗ್‌ ಆಗಿರುವವರನ್ನು ಹೊರತುಪಡಿಸಿ ಬೇರೆಯವರಿಗೆ ಕಾಣುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page