ಹಾರ್ಮುಜ್ ಜಲಸಂಧಿ ವಿವಾದ : ಟ್ರಂಪ್ ಎಚ್ಚರಿಕೆ ಬಳಿಕ ಪರಮಾಣು ದಾಳಿಯ ನಡೆಗೆ ಶ್ವೇತಭವನ ನಿರಾಕರಣೆ

ಇರಾನ್ ಮತ್ತು ಇಸ್ರೇಲ್ ನಡುವೆ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಯುದ್ಧ ಸ್ಥಿತಿಯ ಹೇಳಿಕೆ ಈಗ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗಾಗಲೇ ವಿವಾದಕ್ಕೊಳಗಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮರುತೆರೆಯದಿದ್ದರೆ ಗಂಭೀರ ಪರಿಣಾಮಗಳು ಉಂಟಾಗಲಿವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

“ಇಡೀ ನಾಗರಿಕತೆ ನಾಶವಾಗುವ ಮಟ್ಟದ ಪರಿಸ್ಥಿತಿ ಎದುರಾಗಬಹುದು” ಎಂಬ ಟ್ರಂಪ್ ಹೇಳಿಕೆ ಆತಂಕಕ್ಕೆ ಕಾರಣವಾದ ಕೆಲವೇ ಗಂಟೆಗಳ ಬಳಿಕ, ಶ್ವೇತಭವನ ಸ್ಪಷ್ಟನೆ ನೀಡಿದ್ದು, ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದೆ.

ಇದಕ್ಕೂ ಮೊದಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಮೆರಿಕ ಸೇನೆ ಇನ್ನೂ ಬಳಸದೇ ಇರುವ ಹಲವು ಆಯ್ಕೆಗಳಿವೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆಗಳನ್ನು ಪರಮಾಣು ದಾಳಿ ಸಾಧ್ಯತೆಯೊಂದಿಗೆ ಸಂಬಂಧಿಸಲು ಸಾಧ್ಯವಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಅಮೆರಿಕ ಆಡಳಿತವು ನಿಕಟವಾಗಿ ಗಮನಿಸುತ್ತಿದ್ದು, ಸಮಸ್ಯೆಗೆ ರಾಜತಾಂತ್ರಿಕ ಪರಿಹಾರವೇ ಮುಖ್ಯ ಮಾರ್ಗವೆಂದು ಒತ್ತಿ ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ, ವಿಶ್ವ ಸಮುದಾಯ ಕಣ್ಣಿಟ್ಟು ನೋಡುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು