Home ಬ್ರೇಕಿಂಗ್ ಸುದ್ದಿ ಮೋಹನ್ ಭಾಗವತ್ ಜೀ ಮತಗಳ್ಳತನದ ಆರೋಪದ ಬಗ್ಗೆ ಮೌನವೇಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಮೋಹನ್ ಭಾಗವತ್ ಜೀ ಮತಗಳ್ಳತನದ ಆರೋಪದ ಬಗ್ಗೆ ಮೌನವೇಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಮತಗಳ್ಳತನದ ಆರೋಪ ಹಾಗೂ SIR ಪ್ರಕ್ರಿಯೆ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಜೀ ಮೌನ ವಹಿಸಿರುವುದಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಭಾರತದ ಆರ್ಥಿಕತೆ, ವಿದೇಶಾಂಗ ನೀತಿ, ಧರ್ಮ, ಸಾಮಾಜಿಕ ಮೌಲ್ಯಗಳು, ವಿಜ್ಞಾನದ ವ್ಯಾಖ್ಯಾನ ಹಾಗೂ ಭಾರತೀಯರು ಎಷ್ಟು ಮಕ್ಕಳನ್ನು ಹೊಂದಬೇಕು ಎಂಬ ವಿಚಾರಗಳ ಬಗ್ಗೆಯೂ RSS ಅಭಿಪ್ರಾಯ ಹೊಂದಿದೆ.

ಗೋಮೂತ್ರದಿಂದ ಕ್ಯಾನ್ಸರ್ ಗುಣವಾಗುತ್ತದೆ ಎಂಬ ಹೇಳಿಕೆಗಳಿಂದ ಹಿಡಿದು ಪೌರಾಣಿಕ ಕಥೆಗಳನ್ನು ವೈಜ್ಞಾನಿಕ ಸತ್ಯವೆಂದು ಬಿಂಬಿಸುವವರೆಗೂ ಯಾವುದೇ ವಿಷಯವೂ ಅವರ ಪರಿಣತಿಯ ವ್ಯಾಪ್ತಿಯಿಂದ ಹೊರತಾಗಿಲ್ಲ ಎಂಬಂತೆ ವರ್ತಿಸುತ್ತಾರೆ. ಆದರೆ ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಮತಗಳ್ಳತನದ ಆರೋಪಗಳ ವಿಚಾರ ಬಂದಾಗ ಮಾತ್ರ ತಮ್ಮ ಉಪನ್ಯಾಸಗಳು ನಿಂತುಹೋಗುತ್ತವೆ ಎಂದು ಪ್ರಿಯಾಂಕ್ ಖರ್ಗೆ ಮೋಹನ್ ಭಾಗವತ್ ಅವರನ್ನು ಪೋಸ್ಟ್ ನಲ್ಲಿ ಟೀಕಿಸಿದ್ದಾರೆ. ಮೋಹನ್ ಭಾಗವತ್ ಜೀ ಈಗ ಎಲ್ಲಿದ್ದಾರೆ? ಚುನಾವಣಾ ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಗಳು ಎದ್ದಾಗ ಈ ಮೌನ ಏಕೆ?. ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪ ಹಾಗೂ ಚುನಾವಣಾ ಪ್ರಕ್ರಿಯೆಯ ಹೊಣೆಗಾರಿಕೆ ವಿಚಾರವಾಗಿ ವಿರೋಧ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ನಡುವೆ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

You cannot copy content of this page

Exit mobile version