Friday, June 14, 2024

ಸತ್ಯ | ನ್ಯಾಯ |ಧರ್ಮ

‘ವಿಕಿಪೀಡಿಯ’ ದ ಹೊಸ ಹಾಡು ಮೋಡಕ್ಕೆ ಮೋಡ ಎಂದು ಗುನುಗಿದ ರಘು ದೀಕ್ಷಿತ್

ಸೋಮು ಹೊಯ್ಸಳ ನಿರ್ದೇಶನದಲ್ಲಿ ಮೂಡಿಬಂದಿರುವ ವಿಕಿಪೀಡಿಯ ಸಿನಿಮಾ ಇದೀಗ ತನ್ನ ಹೆಸರಿನಿಂದಲೇ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿದೆ. ಬದುಕಿಗೆ ಹತ್ತಿರವಾದ, ಎಲ್ಲರ ಮನಸಿಗೆ ನಾಟುವಂತಹ ಕಥೆಯೊಂದನ್ನು ಹೆಣೆದಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ವಿಕಿಪೀಡಿಯ ಸಿನಿಮಾ 26ಕ್ಕೆ ತೆರೆಗೆ ಬರ್ತಿದ್ದು,  ಚಿತ್ರತಂಡ ಒಂದೊಂದೇ ಹಾಡುಗಳನ್ನು ಅನಾವರಣ ಮಾಡ್ತಿದೆ. ಇದೀಗ ಮೋಡಕ್ಕೆ‌ ಮೋಡ ಎಂಬ ಮೆಲೋಡಿ ಹಾಡನ್ನು ಬಿಡುಗಡೆ ಮಾಡಿದ್ದು, ಈ ಹಾಡು ಕೇಳುಗರನ್ನು ಮಂತ್ರ‌ ಮುಗ್ದರನ್ನಾಗಿ ಮಾಡುತ್ತಿದೆ.

ಪ್ರಮೋದ್ ಮರವಂತೆ ಅವರ ಸಾಹಿತ್ಯದ ಹಾಡಿಗೆ ರಾಕ್ ಅಂಡ್ ನಿಲ್ ಸೊಗಸಾದ ಮ್ಯೂಸಿಕ್ ನೀಡಿದ್ದು, ರಘು ದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಹಲವಾರು ಧಾರಾವಾಹಿಗಳಲ್ಲಿ ಮಿಂಚಿರುವ ಯಶವಂತ್ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ನಟಿಸಿದ್ದಾರೆ. ಡ್ರಾಮಾ, ಎಮೋಷನ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ಎಂದು ಹೇಳಿಕೊಳ್ಳುವ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಎಚ್‌.ಕೆ. ಅವರ ಛಾಯಾಗ್ರಹಣ,  ರಾಕೇಶ್ ಮತ್ತು ನೀಲಿಮ ಸಂಗೀತ, ರವಿಚಂದ್ರನ್ ಸಿ. ಸಂಕಲನವಿದೆ. ರಫ್ ಕಟ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಸಿನಿಮಾ 26ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ.

Related Articles

ಇತ್ತೀಚಿನ ಸುದ್ದಿಗಳು