Friday, June 21, 2024

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್‌ ಬಾನೋ ಪ್ರಕರಣ: ಗುಜರಾತ್‌ ಅತ್ಯಾಚಾರಿಗಳ ಸಹಾಯಕ್ಕೆ ಮಹಾರಾಷ್ಟ್ರದ ಕ್ಷಮಾದಾನ ನೀತಿ ಸಹಾಯಕ್ಕೆ ಬರಬಹುದೇ?

ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸುವ ಹಕ್ಕು ಮಹಾರಾಷ್ಟ್ರ ಸರ್ಕಾರ ಹೊಂದಿದೆಯೇ ಹೊರತು ಗುಜರಾತ್‌ ಸರ್ಕಾರಕ್ಕೆ ಅಂತಹ ಅಧಿಕಾರವಿಲ್ಲ ಎಂದು ಹೇಳಿತ್ತು. ಈ ಹಿಂದೆ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದ ಕಾರಣ ಈ ಪ್ರಕರಣದ ವ್ಯಾಪ್ತಿ ಮಹಾರಾಷ್ಟ್ರದಲ್ಲಿ ಬರುತ್ತದೆ.

ಈಗ ಸುಪ್ರೀಂ ಕೋರ್ಟ್‌ ಆದೇಶದ ನಂತರ ಎಲ್ಲರ ಕಣ್ಣು ಮಹಾರಾಷ್ಟ್ರ ಸರ್ಕಾರದತ್ತ ತಿರುಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಶಿವಸೇನಾ ಸರ್ಕಾರವಿರುವುದರಿಂದಾಗಿ ಈ ಕುರಿತು ಕುತೂಹಲ ಹೆಚ್ಚಾಗಿದೆ.

ಹಾಗಿದ್ದರೆ ಮಹಾರಾಷ್ಟ್ರ ಸರ್ಕಾರಕ್ಕೆ ಈ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಸಾಧ್ಯವೇ?

ನ್ಯಾಯಾಲಯದ ಆದೇಶವು ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಪರಿಹಾರ ನೀತಿಯು ಶಿಕ್ಷೆಗೊಳಗಾದ ಪುರುಷರ ಮನವಿಗೆ ಅನ್ವಯಿಸುತ್ತದೆ ಎಂದು ಸೂಚಿಸುತ್ತದೆ. ತೀರ್ಪಿನ ಪ್ಯಾರಾಗ್ರಾಫ್ 52.6 ಕ್ಷಮಾದಾನ ಪ್ರಕ್ರಿಯೆಯಲ್ಲಿ ವಿಚಾರಣಾ ನ್ಯಾಯಾಲಯದ ಅಭಿಪ್ರಾಯದ ಮಹತ್ವವನ್ನು ಒತ್ತಿಹೇಳುತ್ತದೆ.

ಒಂದು ವೇಳೆ ಈ ಅಪರಾಧಿಗಳ ಮಾಫಿ ಅರ್ಜಿಯನ್ನು ಪರಿಗಣಿಸುವುದಿದ್ದರೆ 11.04.2008 ರ ಸರ್ಕಾರದ ನಿರ್ಣಯದ ನಿಯಮಗಳ ಪ್ರಕಾರ ಪರಿಗಣಿಸಬೇಕಾಗುತ್ತದೆ.

ಮಹಾರಾಷ್ಟ್ರದ 2008 ರ ಸರ್ಕಾರದ ನಿರ್ಣಯವು ಮಾಫಿನಾಮೆಗೆ ಅರ್ಹತೆಯ ಚೌಕಟ್ಟನ್ನು ಹೊಂದಿಸುತ್ತದೆ. ಯಾವುದೇ ಮಾಫಿಗೆ ಮೊದಲು ಅಪರಾಧಿಯು 18 ವರ್ಷಗಳ ಕನಿಷ್ಠ ಶಿಕ್ಷೆಯನ್ನು ಅನುಭವಿಸಿರಬೇಕು ಎಂದು ನಿರ್ದೇಶನವು ಹೇಳುತ್ತದೆ. ಮಹಿಳೆಯರ ವಿರುದ್ಧದ ಅಸಾಧಾರಣ ಹಿಂಸೆಯನ್ನು ಒಳಗೊಂಡ ಅಪರಾಧಗಳಿಗೆ, ಅಪರಾಧಿಗಳು 28 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರವಷ್ಟೇ ಕ್ಷಮೆಗೆ ಅರ್ಹರಾಗಬಹುದು.

2008ರ ನೀತಿಯನ್ನು ಪರಿಗಣಿಸಿ, ಹನ್ನೊಂದು ಅಪರಾಧಿಗಳಿಗೆ ಬಿಡುಗಡೆ ನೀಡುವುದಾದರೂ ಅದಕ್ಕಾಗಿ ಅವರು 2026ರ ತನಕ ಕಾಯಬೇಕು. ಆದರೆ, ಅಸಾಧಾರಣ ಹಿಂಸಾಚಾರದ ಷರತ್ತಿನ ಪ್ರಕಾರ ಅವರು 2036ರವರೆಗೆ ಜೈಲಿನಲ್ಲಿರಬೇಕಾಗುತ್ತದೆ.

2008ರ ಕ್ಷಮಾದಾನ ನೀತಿಯಲ್ಲದೆ 1992ರ ಕ್ಷಮಾದಾನ ನೀತಿಯೂ ಅಸ್ಥಿತ್ವದಲ್ಲಿದೆ. ಆದರೆ ಕೆಲವು ಅನಿಶ್ಚಿತತೆಗಳ ಕಾರಣ ನ್ಯಾಯಾಧೀಶರು 2008ರ ನೀತಿಯನ್ನು ಈ ಪ್ರಕರಣದಲ್ಲಿ ಅನ್ವಯಿಸಿದ್ದಾರೆ. ಆದರೆ 1992ರ ನೀತಿಯಡಿಯಲ್ಲಿಯೂ, ಅಪರಾಧದ ತೀವ್ರತೆಯನ್ನು ಅವಲಂಬಿಸಿ 2030 ಅಥವಾ 2036ರ ನಂತರವಷ್ಟೇ ಬಿಡುಗಡೆ ಸಾಧ್ಯ.

ಸರ್ಕಾರ ಈ ಕುರಿತಾದ ನೀತಿಗಳನ್ನು ಬದಲಾಯಿಸದೇ ಹೋದಲ್ಲಿ ಈ ಹನ್ನೊಂದು ಜನ ಅಪರಾಧಿಗಳಿಗೆ ಜೈಲೇ ಗತಿ.

#bilkis bano,bilkis bano case,bilkis bano news,supreme court on bilkis bano case,bilkis bano verdict,bilkis bano hearing,bilkis bano gangrape,bilkis bano case today,bilkis bano rape case,bilkis bano case 2002,bilkis bano gujarat case,survivor bilkis bano,bilkis bano gang rape case,bilkis bano gang rape,bilkis bano case kya hai,bilkis bano bano rape case verdict,bilkis bano gangrape case,supreme court on bilkis bano,bilkis bano gang rape case 2002

Related Articles

ಇತ್ತೀಚಿನ ಸುದ್ದಿಗಳು